ಯು/ಎ ಪ್ರಮಾಣಪತ್ರ ಪಡೆದ ಸಾರ್ವಜನಿಕರಲ್ಲಿ ವಿನಂತಿ!

Picture of Cinibuzz

Cinibuzz

Bureau Report

ಇತ್ತೀಚಿಗಷ್ಟೇ ಟೀಸರ್ ರಿಲೀಸ್ ಮಾಡಿಕೊಂಡು ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್ ನಲ್ಲಿದ್ದ ಸಿನಿಮಾ ಸಾರ್ವಜನಿಕರಲ್ಲಿ ವಿನಂತಿ. ಸಾರ್ವಜನಿಕರನ್ನು ಗಮನದಲ್ಲಿಟ್ಟುಕೊಂಡು ತಿದ್ದಿ ತೀಡುವ, ತಪ್ಪನ್ನು ಗುರುತಿಸುವ ಸಂದೇಶವೊಂದನ್ನು ನೀಡುವ ಕೆಲಸವನ್ನು ಚಿತ್ರತಂಡ ಮನರಂಜನಾತ್ಮಕವಾಗಿ ಮಾಡಲು ಹೊರಟಿರುವುದೇ ಕಥಾ ಹೂರಣ. ಇತ್ತೀಚಿಗಷ್ಟೇ ಸೆನ್ಸಾರ್ ವೀಕ್ಷಣೆಗೆ ತೆರಳಿದ್ದ ಸಾರ್ವಜನಿಕರಲ್ಲಿ ವಿನಂತಿ ಸಿನಿಮಾ ಯಾವುದೇ ಕಟ್ಟು ಮ್ಯೂಟಿಲ್ಲದೇ ಯು/ಎ ಪ್ರಮಾಣಪತ್ರವನ್ನು ಪಡೆದುಕೊಂಡಿರುವುದು ಚಿತ್ರತಂಡದ ಸಂತಸಕ್ಕೆ ಕಾರಣವಾಗಿದೆ.

ಅದೇ ಖುಷಿಯಲ್ಲಿ ಅಂತರಾಷ್ಟ್ರೀಯ ಯೋಗ ದಿನದ ನಿಮಿತ್ತ ಜೂನ್ 21ಕ್ಕೆ ಸಿನಿಮಾವನ್ನು ರಿಲೀಸ್ ಮಾಡುವ ಪ್ಲ್ಯಾನ್ ಕೂಡ ಮಾಡಿಕೊಂಡಿದೆ. ಇನ್ನು ಸಿನಿಮಾ ಬಿಡುಗಡೆಯ ಕುರಿತು ನಿರ್ದೇಶಕ ಕೃಪಾಸಾಗರ್ ಮಾತನಾಡಿ ಸಾರ್ವಜನಿಕರಲ್ಲಿ ವಿನಂತಿ ನಿಮ್ಮೆಲ್ಲರ‌ ಆಶೀರ್ವಾದದಿಂದ‌ ಬೆಳ್ಳಿ ತೆರೆಯ ಮೇಲೆ‌ ಬರುತ್ತಿದೆ ಎರಡು ವರ್ಷದ ಪರಿಶ್ರಮ ನಿಮ್ಮ ಮಡಿಲಿಗೆ ಅರ್ಪಿಸುತ್ತಿದ್ದೇನೆ. ಎಲ್ಲರೂ ‌ಸೇರಿ ಸಿನಿಮಾ ಯಶಸ್ವಿಗೊಳಿಸಿರಿ. ಹರಸಿ ಹಾರೈಸಿ” ಎಂದು ಸಾರ್ವಜನಿಕರಲ್ಲಿ ವಿನಂತಿ ಮಾಡಿಕೊಂಡಿದ್ದಾರೆ.

ಇನ್ನಷ್ಟು ಓದಿರಿ

Scroll to Top