ಕತ್ರಿನಾ ಕೈಫ್ ಲೆಸ್ಬಿಯನ್ ಆಗಬೇಕಿತ್ತಂತೆ!

Picture of Cinibuzz

Cinibuzz

Bureau Report

ಕತ್ರಿನಾ ಕೈಫ್ ಗೆ ಯಾಕೋ ತಲೆಯೇ ನಿಲ್ಲುತ್ತಿಲ್ಲ. ಹೋದಕಡೆಯೆಲ್ಲಾ ಸಾಕಷ್ಟು ಬೇಡದ ವಿಚಾರಗಳನ್ನು ಮಾತನಾಡುತ್ತಲೇ ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿ ಟ್ರೋಲ್ ಗೆ ಒಳಗಾಗುತ್ತಲೇ ಇದ್ದಾರೆ. ಇತ್ತೀಚಿಗಷ್ಟೇ ಜಾನ್ವಿ ಕಪೂರ್ ಚಡ್ಡಿಯ ಮೇಲೆ ಕಣ್ಣಾಕಿದ್ದ ಕತ್ರಿನಾ ಕೈಫ್  ಸದ್ಯ ಕರೀನ ಕಪೂರ್ ಮೇಲೆ ಕಣ್ಣಾಕಿದ್ದಾರೆ.

ಹೌದು ಖಾಸಗಿ ವಾಹಿನಿಯೊಂದರ ಸಂದರ್ಶನದಲ್ಲಿ ಕತ್ರಿನಾ ಕಪೂರ್ ತಾನೇನಾದರೂ ಲೆಸ್ಬಿಯಂ ಆಗಿದ್ದರೆ ಕರೀನಾ ಕಪೂರ್ ಜತೆಗೆ ಡೇಟಿಂಗ್ ಮಾಡುತ್ತಿದ್ದೆ. ಅದರಲ್ಲೂ ಸಲಿಂಗಿಯಾಗಿ ಸಂಬಂಧ ಹೊಂದುವಂತಿದ್ದರೆ ನಿಸ್ಸಂಶಯವಾಗಿ ಕರೀನಾ ಜೊತೆಗೆ ಅಫೇರ್ ಇಟ್ಟುಕೊಳ್ಳುತ್ತಿದ್ದೆ ಎಂದು ಮುಕ್ತವಾಗಿ ಹೇಳುವ ಮೂಲಕ ಎಲ್ಲರಿಗೂ ಶಾಕ್ ನೀಡಿದ್ದಾರೆ.

ಬಾಲಿವುಡ್ ನ ಮಿಲ್ಕಿ ಬ್ಯೂಟಿ ಕರೀನಾ ಕಪೂರ್ ಖಾನ್ ತಮ್ಮ ದೇಹ ಸೌಂದರ್ಯ, ಮೈ ಮಾಟದ ಮೂಲಕ ಪಡ್ಡೆ ಹೈಕಳ ನಿದ್ದೆ ಕದ್ದಿರುವುದು ಸಾಮಾನ್ಯವಾಗಿತ್ತು. ಆದರೆ ಮತ್ತೊಬ್ಬ ಹಾಟ್ ಬ್ಯೂಟಿಯ ಮನಗೆದ್ದಿದ್ದಾರೆ ಎನ್ನುವುದಂತೂ ಎಲ್ಲರೂ ಕಣ್ಣಗಲಿಸಿ ನೋಡುವಂತಾಗಿದೆ.

ಇನ್ನಷ್ಟು ಓದಿರಿ

Scroll to Top