ಸ್ಯಾಂಡಲ್ ವುಡ್ ಗೆ ಎಂಟ್ರಿಯಾಗಲಿದ್ದಾರೆ ಲೇಔಟ್ ಕೃಷ್ಣಪ್ಪನ ಫಾರ್ ರಿಲೇಟಿವ್!

Picture of Cinibuzz

Cinibuzz

Bureau Report

ಸಾಕಷ್ಟು ಸಿನಿಮಾಗಳಲ್ಲಿ ತಮ್ಮ ನೆಚ್ಚಿನ ನಟನ ಕುರಿತಾದ ಅಭಿಮಾನವನ್ನು ವ್ಯಕ್ತಪಡಿಸುವ ಅಭಿಮಾನಿಯ ಸೀನ್ ಗಳನ್ನು ನೋಡುತ್ತಲೇ ಇರುತ್ತೇವೆ. ಆದರೆ ಸೂಪರ್ ಹಿಟ್ ಧಾರಾವಾಹಿಯ ಅಭಿಮಾನಿಯ ಕುರಿತಾಗಿಯೇ ಹೊಸ ಸಿನಿಮಾವೊಂದು ಸದ್ದಿಲ್ಲದೇ ಶೂಟಿಂಗ್ ಮುಗಿಸಿಕೊಂಡಿದೆ. ಹೌದು ಚಿತ್ರಕ್ಕೆ ಫ್ಯಾನ್ ಎಂದು ಟೈಟಲ್ ಇಟ್ಟಿದ್ದು, ವಿಶೇಷವೆಂದರೆ ಈ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಗೆ ಲೇಔಟ್ ಕೃಷ್ಣಪ್ಪನವರ ಫಾರ್ ರಿಲೇಟಿವ್ ಆರ್ಯನ್ ಎಂಟ್ರಿಯಾಗುತ್ತಿದ್ದಾರೆ. ಎಂಬಿಎ ವಿದ್ಯಾಭ್ಯಾಸದ ನಂತರ ಭಗವಾನ್ ಆ್ಯಕ್ಟಿಂಗ್ ತರಬೇತಿ ಸಂಸ್ಥೆಯಲ್ಲಿ ನಟನೆಯ ತರಬೇತಿ ಪಡೆದು ನಟನಾಗಿ ಅದೃಷ್ಟ ಪರೀಕ್ಷೆಗಿಳಿಯುತ್ತಿದ್ದಾರೆ ಆರ್ಯನ್. ಮಧುಮಗಳು, ದೊಡ್ಮನೆ ಸೊಸೆ ಧಾರಾವಾಹಿಗಳನ್ನು ನಿರ್ದೇಶಿಸಿರುವ ದರ್ಶಿತ್ ಫ್ಯಾನ್ ಸಿನಿಮಾದ ನಿರ್ದೇಶನ ಮಾಡಿದ್ದಾರೆ. ಆರ್ಯನ್ ಗೆ ನಾಯಕಿಯಾಗಿ ಅದ್ವಿತಿ ಶೆಟ್ಟಿ ಜತೆಯಾಗಿದ್ದಾರೆ.

ಇನ್ನಷ್ಟು ಓದಿರಿ

Scroll to Top