ಜೂನ್ 14ಕ್ಕೆ ಸಿಂಗ ಟ್ರೇಲರ್ ರಿಲೀಸ್!

Picture of Cinibuzz

Cinibuzz

Bureau Report

ಸೋಶಿಯಲ್ ಮೀಡಿಯಾದಲ್ಲಿ ಈಗಾಗಲೇ ಹವಾ ಎಬ್ಬಿಸಿರುವ ಸಾಂಗುಗಳ ಪೈಕಿ ಸಿಂಗನ ಶಾನೇ ಟಾಪ್ ಆಗವ್ಳೇ ಸಾಂಗು ಒಂದು. ಪಡ್ಡೆ ಹೈಕಳನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿರುವ ಈ ಸಾಂಗು ಯೂಟ್ಯೂಬ್ ನಲ್ಲಿ ಟ್ರೆಂಡಿಂಗ್ ಕೂಡ. ಸಾಮಾನ್ಯವಾಗಿ ಸಿನಿಮಾದ ಹಾಡುಗಳು ಗೆದ್ದರೆ ಸಿನಿಮಾ ಭಾಗಶಃ ಗೆದ್ದಂತೆಯೇ.

ಸಿಂಗ ಸಿನಿಮಾ ಕೂಡ ಅದೇ ಕೆಟಗೆರಿಯಲ್ಲಿರೋದು ವಿಶೇಷ. ಸಿಂಗನಾಗಿ ಚಿರಂಜೀವಿ ಸರ್ಜಾ ಅಭಿನಯಿಸಿದ್ದು ಅಧಿತಿ ಪ್ರಭುದೇವ ನಾಯಕಿಯಾಗಿ ಅಭಿನಯಿಸಿದ್ದಾರೆ. ಯು.ಕೆ.ಎಂ ಸ್ಟುಡಿಯೋಸ್ ಬ್ಯಾನರ್ ನಲ್ಲಿ ಉದಯ್ ಕೆ ಮೆಹ್ತಾ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದು, ಕೆಲವೇ ದಿನಗಳಲ್ಲಿ ಸಿಂಗ ರಿಲೀಸ್ ಆಗಲಿದೆ. ಅದಕ್ಕೂ ಮುನ್ನ ಸಿಂಗನ ಟ್ರೇಲರನ್ನು ಇದೆ ಜೂನ್ 14ಕ್ಕೆ ರಿಲೀಸ್ ಮಾಡಲು ರಿಲೀಸ್ ಮಾಡಲ ಚಿತ್ರತಂಡವು ಯೋಜನೆ ಹಾಕಿಕೊಂಡಿದೆ.

ಇನ್ನಷ್ಟು ಓದಿರಿ

Scroll to Top