ಸೂರ್ಯವಂಶಿಯಲ್ಲಿ ಸಕತ್ ಸ್ಟಂಟ್ ಮಾಡಿದ ಅಕ್ಕಿ!

Picture of Cinibuzz

Cinibuzz

Bureau Report

ಸಾಮಾನ್ಯವಾಗಿ ಸೆಲೆಬ್ರೆಟಿಗಳಿಗೆ ಎಷ್ಟೇ ವಯಸ್ಸಾದರೂ ಸಹ ಇನ್ನೂ ಹುಡುಗರಂತೆಯೇ ಕಾಣಿಸುತ್ತಾರೆ. ಅಲ್ಲದೇ ತಮ್ಮ ತಮ್ಮ ಸಿನಿಮಾಗಳಲ್ಲಿ 50 ದಾಟಿದರೂ ಇನ್ನೂ ಯುವಕರಂತೆ ಸ್ಟಂಟ್ ಗಳನ್ನು, ಫೈಟಿಂಗ್ ಗಳನ್ನು ಮಾಡುತ್ತಾರೆ. ಸ್ಯಾಂಡಲ್ ವುಡ್ ನಿಂದ ಬಾಲಿವುಡ್ ನ ವರೆಗೂ ತಮ್ಮ ಚಾರ್ಮ್ ಉಳಿಸಿಕೊಳ್ಳುವಲ್ಲಿ ಯಾವುಬ್ಬ ನಟನೂ ಇಲ್ಲಿಯವರೆಗೂ ಹಿಂದೆ ಬಿದ್ದಿಲ್ಲ.

ಸದ್ಯ ಅಕ್ಷಯ್ ಕುಮಾರ್ ಮಾಡಿರುವ ಸ್ಟಂಟ್ ವ್ಯಾಪಕವಾಗಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಪಡ್ಡೆ ಹೈಕಳು ದಿಗಿಲಾಗುವಂತೆ ಮಾಡಿದೆ. ಹೌದು ಸೂರ್ಯವಂಶಿ ಸಿನಿಮಾದ ಶೂಟಿಂಗ್ ನಲ್ಲಿ ತೊಡಗಿಕೊಂಡಿರುವ ಅಕ್ಕಿ ಚಿತ್ರದ ಸೀನೊಂದಕ್ಕೆ ಹೆಲಿಕಾಪ್ಟರ್​ನಲ್ಲಿ ನೇತಾಡುವ ಮೂಲಕ ಮೈ ನವಿರೇಳಿಸುವ ಸಾಹಸ ಮಾಡಿದ್ದಾರೆ.  ಅದರ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಸ್ವತಃ ಹಂಚಿಕೊಂಡಿರುವ ಅಕ್ಷಯ್, ‘ಹಾಗೇ ಸುಮ್ಮನೆ ಹೆಲಿಕಾಪ್ಟರ್​ನಲ್ಲಿ ನೇತಾಡುತ್ತಿದ್ದೇವೆ’ ಎಂದು ಕೂಲ್ ಆಗಿ ಬರೆದುಕೊಂಡಿದ್ದಾರೆ. ಅಲ್ಲದೇ  ‘ದಯವಿಟ್ಟು ಇದನ್ನು ಯಾರೂ ಪ್ರಯತ್ನಿಸಬೇಡಿ. ಪರಿಣತರ ಮೇಲ್ವಿಚಾರಣೆಯಲ್ಲಿ ಮಾತ್ರ ಇಂಥದ್ದನ್ನೆಲ್ಲ ಮಾಡಲಾಗುತ್ತದೆ’ ಎಂದು ಅಭಿಮಾನಿಗಳಿಗೆ ಎಚ್ಚರಿಕೆಯನ್ನೂ ನೀಡಿದ್ದಾರೆ. ಸೂರ್ಯವಂಶಿ ಸಿನಿಮಾವನ್ನು ಗೋಲ್ ವಾಲ್ ಅಗೇನ್, ಸಿಂಬಾ ಖ್ಯಾತಿಯ ರೋಹಿತ್ ಶೆಟ್ಟಿ ನಿರ್ದೇಶನ ಮಾಡುತ್ತಿದ್ದಾರೆ. ಅಕ್ಷಯ್ ಕುಮಾರ್ ಗೆ ಜೋಡಿಯಾಗಿ ಕತ್ರಿನಾ ಕೈಫ್ ನಟಿಸುತ್ತಿದ್ದಾರೆ. 2020ರ ಮೇ ತಿಂಗಳಿಗೆ ಸೂರ್ಯವಂಶಿ ರಿಲೀಸ್ ಆಗುವ ಸಾಧ್ಯತೆ ಇದೆ.

ಇನ್ನಷ್ಟು ಓದಿರಿ

Scroll to Top