ಪ್ರಿಯಾಂಕ ಚೋಪ್ರಾ ಮದುವೆಯಾದ ಮೇಲಂತೂ ಗಂಡ ನಿಕ್ ಜೊತೆಗೆ ಮದುವೆ, ಶುಭ ಸಮಾರಂಭಗಳಲ್ಲಿ ಕಲರ್ ಫುಲ್ ಆಗಿ ಕಾಣಿಸಿಕೊಳ್ಳುತ್ತಲೇ ಇರುತ್ತಾರೆ. ಜತೆಗೆ ತನ್ನ ವಿಚಿತ್ರ ವರ್ತನೆ, ಡ್ರೆಸ್ಸಿಂಗ್ ಸೆನ್ಸ್ ಮೂಲಕ ವ್ಯಾಪಕ ಟೀಕೆಗೂ ಒಳಗಾಗಿ ಸೋಶಿಯಲ್ ಮೀಡಿಯಾದಲ್ಲಿ ಟ್ರೋಲಿಗರ ಬೈಗುಳಕ್ಕೆ ಪದೇ ಪದೇ ಗುರಿಯಾಗುತ್ತಲೇ ಇದ್ದಾರೆ.
View this post on InstagramA post shared by Priyanka Chopra Jonas (@priyankachopra) on
ಇತ್ತೀಚಿಗೆ ಪ್ರಿಯಾಂಕ ಚೋಪ್ರಾ ತಮ್ಮ ಇನ್ ಸ್ಟಾಗ್ರಾಂ ಖಾತೆಯಲ್ಲಿ ಪೋಟೋವೊಂದನ್ನು ಶೇರ್ ಮಾಡಿದ್ದಾರೆ. ಅಲ್ಲದೇ ನಾನು ನನ್ನ ಸ್ಯಾರಿ ಡಿಸೈನ್ ಮಾಡಿರುವ ವಿನ್ಯಾಸಗಾರರಿಗೆ ಮೊದಲು ಧನ್ಯವಾದವನ್ನು ಅರ್ಪಿಸುತ್ತೇನೆ. ಎಂದು ಬರೆದುಕೊಂಡಿದ್ದಾರೆ. ಸದ್ಯ ಆ ಫೋಟೋ ಟ್ರೋಲಿಗೆ ಗುರಿಯಾಗಿದ್ದು, ಈ ಪೋಟೋದಲ್ಲಿ ಸೀರೆ ಎಲ್ಲಿದೆ? ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ. ಈ ಮೂಲಕ ಪಿಂಕಿ ಭಾರತೀಯ ಸಂಸ್ಕೃತಿಗೆ ಅವಮಾನ ಮಾಡಿದ್ದೀರ ಎಂದು ಸಹ ಕಮೆಂಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಫೋಟೋಗೆ ಕಮೆಂಟ್ ಗಳ ಸಾಗರವೇ ಹರಿದುಬರುತ್ತಿದೆ.











































