ರಾಕುಲ್ ಕಂಡ್ರೆ ಶ್ರೀರೆಡ್ಡಿಗೆ ವಾಂತಿ ಬರುತ್ತಂತೆ!

Picture of Cinibuzz

Cinibuzz

Bureau Report

ಕಾಸ್ಟಿಂಗ್ ಕೌಚ್ ನ ಕುರಿತಾಗಿ ವಿವಾದಾತ್ಮಕ ಹೇಳಿಕೆಗಳನ್ನು ಮುಚ್ಚುಮರೆಯಿಲ್ಲದೇ ಹೇಳಿದ ತೆಲುಗು ನಟಿ ಶ್ರೀರೆಡ್ಡಿ. ಈಕೆ ಟಾಲಿವುಡ್, ಕಾಲಿವುಡ್ ಸೇರಿದಂತೆ ಬಹುತೇಕ ಸ್ಟಾರ್ ಸೆಲೆಬ್ರೆಟಿಗಳ ವಿರುದ್ಧ ಈ ಕುರಿತು ವಿವಾದಾತ್ಮಕ ಆರೋಪಗಳನ್ನು ಮಾಡಿದವರು. ಅಲ್ಲದೇ ಕೆಲ ಸ್ಕಾಂಡಲ್ ಗಳಲ್ಲಿ ಭಾಗಿಯಾಗಿರುವ ನಟಿಮಣಿಯರ ಹೆಸರುಗಳನ್ನು ರಿವೀಲ್ ಮಾಡಿದವರು. ಸದ್ಯ ಈ ವಿವಾದಾತ್ಮಕ ನಟಿ ಇತ್ತೀಚಿಗೆ ರಿಲೀಸ್ ಆದ ಸೂರ್ಯ ಅಭಿನಯದ ಎನ್ ಜಿ ಕೆ ಸಿನಿಮಾದ ಕುರಿತಾಗಿ ಪೋಸ್ಟ್ ಒಂದನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.

ಶ್ರೀ ರೆಡ್ಡಿ ತನ್ನ ಫೇಸ್ ಬುಕ್ ಅಕೌಂಟ್ ನಲ್ಲಿ ಎನ್ ಜಿ ಕೆ ಚಿತ್ರದಲ್ಲಿ ರಾಕುಲ್ ವಾಂತಿ ಬರುವಂತೆ ತೀರಾ ಅಸಹ್ಯವಾಗಿ ನಟಿಸಿದ್ದಾರೆ. ಪಲ್ಲವಿ ಯು ರಾಕ್ಸ್ ಮೈ ರೌಡಿ ಬೇಬಿ ಎಂದು ಬರದುಕೊಂಡಿದ್ದಾರೆ. ಜತೆಗೆ ಶ್ರೀ ರೆಡ್ಡಿ ಎನ್ ಜಿ ಕೆ ಎಂದು ಬರೆದುಕೊಳ್ಳುವ ಬದಲಾಗಿ ವೈ ಜಿ ಕೆ ಎಂದು ಬರೆದುಕೊಂಡಿರುವುದು ನಗೆ ಪಾಟಲಿಗೂ ಕಾರಣವಾಗಿದೆ. ಸೂರ್ಯ ಲೀಡ್ ರೋಲ್ ನಲ್ಲಿ ಕಾಣಿಸಿಕೊಂಡಿರುವ ಎನ್ ಜಿ ಕೆ ಚಿತ್ರದಲ್ಲಿ ಸಾಯಿ ಪಲ್ಲವಿ ಮತ್ತು ರಾಕುಲ್ ಪ್ರೀತ್ ಸಿಂಗ್ ರವರು ಲೀಡ್ ನಾಯಕಿಯರಾಗಿ ಅಭಿನಯಿಸಿದ್ದು ಈ ಸಿನಿಮಾವನ್ನು ಸೆಲ್ವರಾಘವನ್ ನಿರ್ದೇಶನವನ್ನು ಮಾಡಿದ್ದಾರೆ.

ಇನ್ನಷ್ಟು ಓದಿರಿ

Scroll to Top