ಲಾಂಗ್ ಗ್ಯಾಪ್ ಬಿಗ್ ಹಿಟ್ ನತ್ತ `ಐ ಲವ್ ಯು’!

Picture of Cinibuzz

Cinibuzz

Bureau Report

ಸೂಪರ್ ಸ್ಟಾರ್ ಉಪೇಂದ್ರ ಅವರ ಸಿನಿಮಾಗಳಿಗೆ ಇಂಟ್ರಡಕ್ಷನ್ ಕೊಡುವ ಅಗತ್ಯವೇ ಇಲ್ಲ. ಎಲ್ಲ ಚಿತ್ರಗಳು ವಿಶೇಷವಾದಂತಹವುಗಳೇ. ಓಂ, ಎ, ಸೂಪರ್ ಇತ್ಯಾದಿ ಸಿನಿಮಾಗಳು ಎಲ್ಲವೂ ಸೆನ್ಸೇಷನಲ್ ಸೃಷ್ಟಿಸಿದ ಬ್ಲಾಕ್ ಬಸ್ಟರ್ ಹಿಟ್ ಚಿತ್ರಗಳು. ಉಪೇಂದ್ರ ಅವರ ಸಿನಿಮಾಗಳ ಮೇಲಿನ ನಿರೀಕ್ಷೆಗಳು ಯಾವಾಗಲೂ ಹೈ ಟೆಂಪ್ರೇಚರ್ ನಲ್ಲಿಯೇ ಇರುತ್ತದೆ. ಉಪೇಂದ್ರ ಅವರ ಸಾಕಷ್ಟು ಚಿತ್ರಗಳು ತೆಲುಗು ಮಾರುಕಟ್ಟೆಯಲ್ಲೂ ಗಳಿಕೆಯಲ್ಲೇನು ಹಿಂದೆ ಬಿದ್ದಿಲ್ಲ. ಲಾಂಗ್ ಗ್ಯಾಪ್ ನ ನಂತರ ಅಂತಹುದೇ ಸೆನ್ಸೇಷನಲ್, ಪ್ರಾಮಿಸಿಂಗ್ ಸಿನಿಮಾವೊಂದರಲ್ಲಿ ಉಪ್ಪಿ ನಟಿಸಿದ್ದು, ಉಪ್ಪಿಗೆ ಪ್ರೇಮ ನಿರ್ದೇಶಕ ಆರ್ ಚಂದ್ರು ಸಾಥ್ ನೀಡಿದ್ದಾರೆ.

ಐ ಲವ್ ಯು ಎಂದು ಆ ಚಿತ್ರಕ್ಕೆ ಹೆಸರಿಡಲಾಗಿದ್ದು, ಎರಡು ಡಿಫರೆಂಟ್ ಜಾನರ್ ನ ವ್ಯಕ್ತಿತ್ವಗಳು ಸೇರಿ ನಿರ್ಮಿಸಿರುವ ಸಿನಿಮಾ ಇದಾಗಿದೆ. ಚಿತ್ರ ವಿಚಿತ್ರವಾದ ಡೈಲಾಗ್ ಡೆಲಿವರಿ ಮುಖಾಂತರವೇ ತನ್ನದೇ ಆದ ಫ್ಯಾನ್ ಫಾಲೋಯಿಂಗ್ ಸೃಷ್ಟಿಸಿಕೊಂಡಿರುವ ಉಪ್ಪಿ ಒಂದು ಕಡೆಯಾದರೆ, ನವಿರಾದ ಪ್ರೇಮಕಥೆಗಳ ಮೂಲಕ ತನ್ನದೇ ಆದ ರೊಮ್ಯಾಂಟಿಕ್ ಫಾಲೋವರ್ಸ್ ಗಳನ್ನು ಸೃಷ್ಟಿಸಿಕೊಂಡಿರುವ ಆರ್ ಚಂದ್ರು ಒಂದು ಕಡೆ. ಇವರಿಬ್ಬರ ಸಮ್ಮಿಳಿತ ಐ ಲವ್ ಯು ಆಗಿ ಹೊರಬರಲಿದೆ.

ಈಗಾಗಲೇ ಟ್ರೇಲರ್, ಆಡಿಯೋ ಮೂಲಕ ಸಾಕಷ್ಟು ಹೈಪ್ ಕ್ರಿಯೇಟ್ ಮಾಡಿರುವ ಈ ಸಿನಿಮಾ ರಿಲೀಸ್ ಗೆ ಹತ್ತಿರವಾಗುತ್ತಿದ್ದಂತೆ ಹೃದಯ ಬಡಿತ ಏರಿಳಿತಗೊಳ್ಳುವಂತೆ ಮಾಡಲು ಶುರುವಿಟ್ಟುಕೊಂಡಿದೆ.  ಐ ಲವ್ ಯು ಇದೇ ತಿಂಗಳ 14ಕ್ಕೆ ರಿಲೀಸ್ ಆಗಲಿದ್ದು, ತೆಲುಗು  ಮತ್ತು ಕನ್ನಡ ಭಾಷೆಯಲ್ಲಿ ಏಕಕಾಲದಲ್ಲಿ ಸಾವಿರಕ್ಕೂ ಹೆಚ್ಚಿನ ಚಿತ್ರಮಂದಿರಗಳಲ್ಲಿ ಬಿಡುಗಡೆ ಕಾಣಲಿದೆ. ಇನ್ನು ಉಪೇಂದ್ರ ಅವರಿಗೆ ನಾಯಕಿಯರಾಗಿ ರಚಿತ ರಾಮ್, ಮತ್ತು ಸೋನು ಗೌಡ ನಟಿಸಿದ್ದಾರೆ. ಇನ್ನು ಐ ಲವ್ ಯು ಚಿತ್ರದ ಪ್ರೀ ರಿಲೀಸ್ ಈವೆಂಟನ್ನು ಜೂನ್ 8ಕ್ಕೆ ವಿಶಾಖಪಟ್ಟಣಂನ ಕಡಲ ಕಿನಾರೆಯಲ್ಲಿ ಆಯೋಜಿಸಲಾಗಿದ್ದು, ಚಿತ್ರತಂಡ ಸೇರಿದಂತೆ ದೊಡ್ಡ ತಾರಾ ದಂಡೇ ಆಗಮಿಸಲಿದೆ.

 

 

 

 

ಇನ್ನಷ್ಟು ಓದಿರಿ

Scroll to Top