ದರ್ಬಾರ್ ಟೀಮಿಗೆ ಕಾಂಚನ ಶ್ರೀಮನ್ ಸೇರ್ಪಡೆ!

Picture of Cinibuzz

Cinibuzz

Bureau Report

ಪೊಂಗಲ್ ನಲ್ಲಿ ರಿಲೀಸ್ ಆದ ಪೆಟ್ಟಾದ ಬಿಗ್ ಹಿಟ್ ನ ನಂತರ ರಜನಿಕಾಂತ್ ದರ್ಬಾರ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರವನ್ನು ಸರ್ಕಾರ್ ಖ್ಯಾತಿಯ ಎ.ಆರ್. ಮುರುಗದಾಸ್ ನಿರ್ದೇಶನ ಮಾಡುತ್ತಿದ್ದಾರೆ. ದರ್ಬಾರ್ ಲೈಕಾ ಪ್ರೊಡಕ್ಷನ್ ನಲ್ಲಿ ನಿರ್ಮಾಣ ವಾಗುತ್ತಿದೆ. ದರ್ಬಾರ್ ಚಿತ್ರದಲ್ಲಿ ರಜನಿಕಾಂತ್ ಪೊಲೀಸ್ ಆಫೀಸರ್ ಪಾತ್ರದಲ್ಲಿ ಅಬಿನಯಿಸುತ್ತಿದ್ದು, ರಜನಿಗೆ ಲೇಡಿ ಸೂಪರ್ ಸ್ಟಾರ್ ನಯನಾತಾರ ನಾಯಕಿಯಾಗಿ ಜತೆಯಾಗಿದ್ದಾರೆ. ಇನ್ನುಳಿದಂತೆ ನಿವೇತಾ ಥಾಮಸ್, ಯೋಗಿಬಾಬು, ಸುನೀಲ್ ಶೆಟ್ಟಿ, ಪ್ರತೀಪ್ ಬಬ್ಬರ್, ಜಾನ್ ಮಹೇಂದ್ರ ನಟಿಸಿದ್ದಾರೆ.

ದರ್ಬಾರ್ ಸಿನಿಮಾದ ಕುರಿತಾಗಿ ಹೊಸ ಸುದ್ದಿ ರಿವೀಲ್ ಆಗಿದ್ದು, ರಜನಿಗೆ ಸಾಥ್ ನೀಡಲು ಕಾಂಚಣ ಖ್ಯಾತಿಯ ಶ್ರೀಮನ್ ಜತೆಯಾಗಿದ್ದಾರಂತೆ. ಹೌದು ಈ ಕುರಿತು ಸ್ವತಃ ಶ್ರೀಮನ್ ರವರೇ ಪೋಸ್ಟೊಂದನ್ನು ಹಾಕಿದ್ದು, ತಮ್ಮ ಕೆರಿಯರ್ ನಲ್ಲಿ ಸೂಪರ್ ಸ್ಟಾರ್ ರಜನಿಯ ಜತೆಗೆ ನಟಿಸುವುತ್ತಿರುವುದು ಸಂತಸ ತಂದಿದೆ ಎಂದೂ ಬರೆದುಕೊಂಡಿದ್ದಾರೆ.

ಇನ್ನಷ್ಟು ಓದಿರಿ

Scroll to Top