ಸರ್ಜರಿ ಮಾಡಿಸಿಕೊಂಡು ಟ್ರೋಲ್ ಆದ ಮೌನಿ ರಾಯ್!

Picture of Cinibuzz

Cinibuzz

Bureau Report

ಸೆಲೆಬ್ರೆಟಿಗಳಿಗೆ ತಮ್ಮ ಬ್ಯೂಟಿ ಕೊಂಚ ಡಲ್ ಹೊಡೀತಿದೆ ಅಂತ ಗೊತ್ತಾದ ತಕ್ಷಣವೇ ಸರ್ಜರಿಗಳ ಮೊರೆ ಹೋಗುತ್ತಾರೆ. ಲಕ್ಷಾಂತರ ರುಪಾಯಿಗಳನ್ನು ಖರ್ಚು ಮಾಡಿ ತಮ್ಮ ಸೌಂದರ್ಯವನ್ನು ಹೆಚ್ಚಿಸಿಕೊಳ್ಳುವ ಪ್ರಯತ್ನವನ್ನು ಮಾಡುತ್ತಾರೆ. ಸದ್ಯ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಾಪ್ಟರ್ 1 ಗಲಿ ಗಲಿ ಮೇ ಹಾಡಿಗೆ ಹುಚ್ಚೆದ್ದು ಕುಣಿದಿದ್ದ ನಟಿ ಮೌನಿ ರಾಯ್ ಇಂತಹುದೇ ಸರ್ಜರಿಗೆ ಒಳಗಾಗಿದ್ದಾರೆ. ಆದರೆ ಸರ್ಜರಿ ಮಾಡಿಸಿಕೊಂಡ ಮೇಲೆ ಮೌನಿ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದ್ದಾರೆ. ಇತ್ತೀಚಿಗೆ ಭಾರತ್ ಸಿನಿಮಾದ ಪ್ರೀಮಿಯರ್ ಶೋಗೆ ಬಂದಿದ್ದ ಮೌನಿ ರಾಯ್ ಕಂಡು ಅಭಿಮಾನಿಗಳು ಅರೆ ಕ್ಷಣ ದಿಗಿಲುಗೊಂಡಿದ್ದಾರಂತೆ.

ಹೌದು ಮೌನಿ ರಾಯ್ ತುಟಿಯ ಮತ್ತು ಕಣ್ಣುಬ್ಬಿನ ಸರ್ಜರಿ ಮಾಡಿಸಿಕೊಂಡಿದ್ದು, ತೀರ ಅಸಹ್ಯವಾಗಿ ಕಾಣುತ್ತಿದ್ದಾರಂತೆ. ಮೊದಲಿದ್ದ ಸೌಂದರ್ಯವೇ ಚೆನ್ನಾಗಿತ್ತು ಎಂದು ಸೋಶಿಯಲ್ ಮೀಡಿಯಾದಲ್ಲಿ ಆಕೆಯ ಪೋಟೋ ಹಾಕಿ ಕಮೆಂಟ್ಸ್ ಗಳ ಮೇಲೆ ಕಮೆಂಟ್ಸ್ ಮಾಡುತ್ತಿದ್ದಾರೆ. ಅಲ್ಲದೇ ಮೌನಿರಾಯ್ ಥೇಟ್ ರಾಕಿ ಸಾವಂತ್ ರಂತೆ ಕಾಣುತ್ತಿದ್ದಾರೆಂದು ಕಿಂಡಲ್ ಮಾಡಿದ್ದಾರೆ. ಇದ್ಯಾವುದಕ್ಕೂ ಕ್ಯಾರೆ ಅನ್ನದ ಮೌನಿ ತಮ್ಮ ಹೊಸ ಲುಕ್ಕನ್ನು ಬಹಳಷ್ಟು ಎಂಜಾಯ್ ಮಾಡುತ್ತಿದ್ದಾರೆ.

ಇನ್ನಷ್ಟು ಓದಿರಿ

Scroll to Top