ಥಿಯೇಟರ್ ವಿಚಾರದಲ್ಲಿ ಕೆಜಿಎಫ್ ಮೀರಿಸಿದ ಐ ಲವ್ ಯು!

Picture of Cinibuzz

Cinibuzz

Bureau Report

ರಿಯಲ್ ಸ್ಟಾರ್ ಉಪೇಂದ್ರ ಮತ್ತು ತಾಜ್ ಮಹಲ್ ಚಂದ್ರು ಕಾಂಬಿನೇಷನ್ನಿನ `ಐ ಲವ್ ಯು’ ಸಿನಿಮಾ ಬಿಡುಗಡೆಗೆ ರೆಡಿಯಾಗಿದೆ. ರಿಲೀಸ್ ಗೂ ಮುನ್ನವೇ ಐ ಲವ್ ಯು, ಕೆಜಿಎಫ್ ನ ರೆಕಾರ್ಡ್ ಬ್ರೇಕ್ ಮಾಡುವತ್ತ ಹೆಜ್ಜೆ ಇರಿಸಿದೆ. ಹೌದು ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಸಿನಿಮಾ ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ 350 ಥಿಯೇಟರ್ ಗಳಲ್ಲಿ ರಿಲೀಸ್ ಆಗಿತ್ತು. ಸಿನಿಮಾ ಸೃಷ್ಟಿಸಿದ್ದ ಹೈಪ್ ಹಾಗೂ ರಾಜಮೌಳಿ ಸಹಕಾರದೊಂದಿಗೆ ಅಷ್ಟೊಂದು ಸ್ಕ್ರೀನ್ ಗಳ ಲಭ್ಯವಾಗಿತ್ತು. ಈಗ ಐ ಲವ್ ಯು ಸಿನಿಮಾ ಅದನ್ನೂ ಮೀರಿಸಿದೆ.

ಈಗಾಗಲೇ ಉಪೇಂದ್ರ ತಮ್ಮ ಓಂ, ಉಪೇಂದ್ರ, ಸೂಪರ್, ಸನ್ ಆಫ್ ಸತ್ಯಮೂರ್ತಿ ಸಿನಿಮಾಗಳ ಮೂಲಕ ಆಂಧ್ರಪ್ರದೇಶ, ತೆಲಂಗಾಣ ರಾಜ್ಯದಲ್ಲಿಯೂ ಅಭಿಮಾನಿ ಬಳಗವನ್ನೇ ಹೊಂದಿದ್ದಾರೆ. ಆದ್ದರಿಂದ ಆಂಧ್ರ ಮತ್ತು ತೆಲಂಗಾಣದಲ್ಲಿ ಐ ಲವ್ ಯು ಸಿನಿಮಾಗೆ ಬೇಡಿಕೆ ಜಾಸ್ತಿಯೇ ಇದೆ. ಸಿನಿಮಾ ಬಿಡುಗಡೆಯೂ ದೊಡ್ಡ ಪ್ರಮಾಣದಲ್ಲಿಯೇ ಆಗುತ್ತಿದೆ. ಸದ್ಯ 600 ಸ್ಕ್ರೀನ್ ಗಳಲ್ಲಿ ಐ ಲವ್ ಯು ಚಿತ್ರ ಬಿಡುಗಡೆಯಾಗಲಿದ್ದು, ಈಗಾಗಲೇ 400 ಥಿಯೇಟರ್ ಗಳು ಬುಕ್ ಆಗಿವೆಯಂತೆ. ದಿನದಿಂದ ದಿನಕ್ಕೆ ಚಿತ್ರಮಂದಿರಗಳ ಸಂಖ್ಯೆಯಲ್ಲಿಯೂ ಏರಿಕೆ ಕಂಡುಬರುತ್ತಿದೆ. ವಿತರಣೆಯಲ್ಲಿಯೂ ಪವರ್ ಪ್ರದರ್ಶನ ಮಾಡಿರುವ ಆರ್ ಚಂದ್ರು ಸ್ಕ್ರೀನ್ ಪ್ಲೇನಲ್ಲಿ ಎಷ್ಟರಮಟ್ಟಿಗೆ ಸಕ್ಸಸ್ ಆಗಲಿದ್ದಾರೆಂಬುದನ್ನು ನೋಡಲು ಜೂನ್ 14ರವರೆಗೆ ಕಾದು ನೋಡಬೇಕಿದೆ.

 

ಇನ್ನಷ್ಟು ಓದಿರಿ

Scroll to Top