ಲಂಡನ್ ಗೆ ಹಾರಿದ ಸುದೀಪ್ ಮತ್ತು ದಂಪತಿ!

Picture of Cinibuzz

Cinibuzz

Bureau Report

ಕಿಚ್ಚ ಸುದೀಪ್ ಮತ್ತು ಪ್ರಿಯಾ ಸುದೀಪ್ ಲಂಡನ್ ಗೆ ಹಾರಿದ್ದಾರೆ. ಇವರ ಜತೆಗೆ ರಾಜೀವ್ ಮತ್ತು ಪತ್ನಿ, ಪ್ರದೀಪ್ ಮತ್ತು ಪತ್ನಿ ಕೂಡಾ ಲಂಡನ್ ಗೆ ಪ್ರಯಾಣ ಬೆಳೆಸಿದ್ದಾರೆ. ಈ ಬಗ್ಗೆ ಪ್ರದೀಪ್ ತಮ್ಮ ಟ್ವಿಟರ್ ಖಾತೆಯಲ್ಲಿ ಪೋಟೋವೊಂದನ್ನು ಶೇರ್ ಮಾಡಿದ್ದಾರೆ.

ಈ ತಾರಾ ಜೋಡಿಗಳು ಹಾಲಿಡಿ ಎಂಜಾಯ್ ಮಾಡುವುದಕ್ಕಾಗಿ ಲಂಡನ್ ಗೆ ಹೋಗದೇ ಜೂನ್ 12ರಂದು ಇಂಗ್ಲೆಂಡ್ ನಲ್ಲಿ ಕಾರ್ಪೋರೇಟ್ ಕ್ರಿಕೆಟ್ ಟೂರ್ನಿ ನಡೆಯಲಿದೆ. ಸುದೀಪ್ ಕೂಡಾ ತಂಡವೊಂದನ್ನು ಪ್ರತಿನಿಧಿಸಲಿದ್ದಾರೆ. ಅದಕ್ಕಾಗಿಯೇ ಈ ತಾರಾ ಜೋಡಿಗಳು ಲಂಡನ್ ಗೆ ಪ್ರಯಾಣ ಬೆಳೆಸಿದ್ದಾರೆ. 2017ರ ಟೂರ್ನಿಯಲ್ಲಿ ವಿಷನೈರ್ ತಂಡದ ಪರವಾಗಿ ಆಡಿದ್ದ ಸುದೀಪ್ ಚಾಂಪಿಯನ್ ಕೂಡ ಆಗಿದ್ದರು. ಇದೀಗ ಮತ್ತೆ ಅದೇ ಟೂರ್ನಿಯಲ್ಲಿ ಭಾಗವಹಿಸಲಿದ್ದಾರೆ.

ಇನ್ನಷ್ಟು ಓದಿರಿ

Scroll to Top