ರಾಬರ್ಟ್ ಬಳಗಕ್ಕೆ ಮ್ಯಾಜಿಕಲ್ ಕಂಪೋಸರ್!

Picture of Cinibuzz

Cinibuzz

Bureau Report

ರಾಬರ್ಟ್ ಸಿನಿಮಾ ಈ ಹಿಂದೆಯೇ ಸೆಟ್ಟೇರಿದ್ದರೂ ಸಹ ತಾಂತ್ರಿಕ ವರ್ಗ, ತಾರಾಬಳಗದ ಕುರಿತಾಗಿ ಎಳ್ಳಷ್ಟು ಮಾಹಿತಿಯನ್ನು ಚಿತ್ರತಂಡ ಬಿಟ್ಟುಕೊಟ್ಟಿರಲಿಲ್ಲ. ಆದರೆ ನಿರ್ಮಾಪಕ ಉಮಾಪತಿಯವರೇ ರಾಬರ್ಟ್ ಗೆ ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯಾ ಸಂಗೀತ ಸಂಯೋಜನೆ ಮಾಡಲಿದ್ದಾರೆ ಎಂಬುದನ್ನು ತಿಳಿಸಿದ್ದಾರೆ.

ಡಿ ಬಾಸ್ ಅಭಿಮಾನಿಗಳಿಗೆ ‘ರಾಬರ್ಟ್’ ಸಂಗೀತ ನಿರ್ದೇಶಕರು ಯಾರು ಎನ್ನುವ ಕುತೂಹಲ ಸಾಕಷ್ಟಿತ್ತು. ಕೌತುಕದಿಂದಲೇ ದರ್ಶನ್ ಅಭಿಮಾನಿಯೊಬ್ಬರು ನಿರ್ಮಾಪಕ ಉಮಾಪತಿ ಅವರಿಗೆ ಇನ್ ಸ್ಟಾಗ್ರಾಂ ಖಾತೆಯ ಮೂಲಕ ಸಂದೇಶ ಕಳುಹಿಸಿದ್ದಾರೆ. ಅದಕ್ಕೆ ಪ್ರತಿಕ್ರಿಯೆ ನೀಡಿರುವ ಉಮಾಪತಿ ‘ಅರ್ಜುನ್’ ಎಂದು ಉತ್ತರ ನೀಡಿದ್ದಾರೆ. ಹೀಗಾಗಿ ಸಿನಿಮಾದ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಎನ್ನುವುದು ಸದ್ಯ ಬಹಿರಂಗಗೊಂಡಿದೆ.  ನಟ ದರ್ಶನ್ ಹಾಗೂ ಅರ್ಜುನ್ ಜನ್ಯ ಕಾಂಬಿನೇಶನ್ ನ ಮೂರನೇ ಸಿನಿಮಾ ಇದಾಗಿದೆ. ಈ ಮೊದಲು ಚಕ್ರವರ್ತಿ, ತಾರಕ್ ಚಿತ್ರಗಳಿಗೆ ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಮಾಡಿದ್ದಾರೆ. ಹ್ಯಾಟ್ರಿಕ್ ಗೆಲುವಿಗಾಗಿ ಈ ಜೋಡಿ ಮತ್ತೊಮ್ಮೆ ಒಂದಾಗಲಿದೆ.

ಇನ್ನಷ್ಟು ಓದಿರಿ

Scroll to Top