ಅದೇ ಟ್ರೋಲು. ಅದೇ ಸೀರೆ… ಅದೇ ಡ್ರೆಸ್ಸು… ಅದೇ ಪೋಟೋ ಮೋಸ್ಟ್ ಲೀ ಪ್ರಿಯಾಂಕಗೇ ಬೋರಾಂತಿದೆ. ಆಕೆ ಬಣ್ಣದ ಲೋಕಕ್ಕೆ ಗುಡ್ ಬೈ ಹೇಳುವ ಮೂಲಕ ಬೇಸಾಯ ಮಾಡುವುದಾಗಿ ಹೇಳಿ ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾರೆ. ಹೌದು ನಿಕ್ ಜೋನಾಸ್ ಮತ್ತು ಪ್ರಿಯಾಂಕ ಚೋಪ್ರಾ ಕೃಷಿ ಜೀವನವನ್ನು ನಡೆಸಲು ಡಿಸೈಡ್ ಮಾಡಿದ್ದಾರಂತೆ. ಮ್ಯಾಗ್ ಜಿನ್ ಒಂದಕ್ಕೆ ನೀಡಿರುವ ಸಂದರ್ಶನದಲ್ಲಿ ಕೃಷಿ ಜೀವನದ ಬಗೆಗಿನ ಒಲವನ್ನು ದಂಪತಿಗಳು ತೋಡಿಕೊಂಡಿದ್ದಾರೆ.

ಕೃಷಿಕನಾಗಬೇಕೆಂಬ ಆಸೆ ಬಹಳ ದಿನಗಳಿಂದಲೂ ಇತ್ತು. ಅದನ್ನು ಪ್ರಿಯಾಂಕ ಬಳಿ ಹೇಳಿಕೊಂಡಾಗ ಅವಳಿಗೂ ಇಷ್ಟವಾಯಿತು ಎನ್ನುತ್ತಾರೆ ನಿಕ್ ಜೋನಾಸ್. ಸದ್ಯದಲ್ಲಿಯೇ ಅವರ ಯೋಜನೆಯನ್ನು ಕಾರ್ಯರೂಪಕ್ಕೆ ತರುವ ಪ್ಲ್ಯಾನ್ ನಲ್ಲಿದ್ದಾರಂತೆ. ಎಲ್ಲವನ್ನು ಅನುಭವಿಸುವ ಸಲುವಾಗಿ ಕೃಷಿ ಕೆಲಸವನ್ನು ತ್ಯಜಿಸಿ ಪಟ್ಟಣಕ್ಕೆ ಬರುವ ವ್ಯಕ್ತಿಗಳಿಗೆ ಈ ಮೂಲಕವಾದರೂ ಬೇಸಾಯದ ಮಹತ್ವವೇನೆಂಬುದು ತಿಳಿದರೆ ಒಳಿತಾದೀತು..











































