ಅಯೋಗ್ಯ ಮಹೇಶ್ ಮೇಲೆ ನಿರ್ಮಾಪಕರ ದೂರು!

Picture of Cinibuzz

Cinibuzz

Bureau Report

ಅಯೋಗ್ಯ ಸಿನಿಮಾ ತೆರೆ ಕಂಡು ಸೂಪರ್ ಹಿಟ್ ಚಿತ್ರವಾಗಿ, ಶತದಿನೋತ್ಸವವನ್ನು ಆಚರಿಸಿಕೊಂಡಿದೆ. ಈಗಾಗಲೇ ಸಿನಿಮಾ ನೋಡಿದ ಮಂದಿ ಭಿನ್ನ ಜಾನರ್ ನ ಕಥೆಗೆ ಅಸ್ತು ಎಂದಿದ್ದಾರೆ. ಕಿರುತೆರೆಯಲ್ಲಿಯೂ ಸಾಕಷ್ಟು ಬಾರಿ ಅಯೋಗ್ಯ ಪ್ರಸಾರವಾಗಿದೆ. ಅಲ್ಲದೇ ನೀನಾಸಂ ಸತೀಶ್ ಗೆ ಅಯೋಗ್ಯ ಸಿನಿಮಾ ಕಮ್ ಬ್ಯಾಕ್ ಸಿನಿಮಾ ಕೂಡ. ಸದ್ಯ ಇದೆಲ್ಲದರ ನಡುವೆ ಈ ಸಿನಿಮಾದ ಕುರಿತಾಗಿ ವಿವಾದವೊಂದು ಲೇಟಾಗಿ ಬೆಳಕಿಗೆ ಬಂದಿದೆ. ಅಯೋಗ್ಯ ಸಿನಿಮಾಕ್ಕೆ ಬಂಡವಾಳ ಹೂಡಿದ್ದ ಸಹ ನಿರ್ಮಾಪಕ ಮೋಹನ್ ಅಯೋಗ್ಯ ತಂಡದ ನಡೆಗೆ ಬೇಸರಿಸಿಕೊಂಡಿದ್ದಾರೆ. ಸಿನಿಮಾ ಸೆಟ್ಟೇರುವಾಗ ನಿರ್ದೇಶಕರು ಹೇಳಿದ್ದೇ ಒಂದು ಆಮೇಲೆ ಮಾಡಿದ್ದು ಮತ್ತೊಂದು ಎಂದು ಮಹೇಶ್ ಅವರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಹಿಂದೆ ಅಯೋಗ್ಯ ಸಿನಿಮಾಗೆ ಮೋಹನ್ 10 ಲಕ್ಷ ರುಪಾಯಿ ಬಂಡವಾಳ ಹೂಡಿದ್ದರಂತೆ. ಆದರೆ ಬಂಡವಾಳ ಹೆಚ್ಚಾಯಿತು ಎನ್ನುವ ಕಾರಣಕ್ಕೆ ಸಿನಿಮಾದಿಂದ ಹೊರಬಂದಿದ್ದರು. ಆನಂತರ ಟಿ.ಆರ್. ಚಂದ್ರಶೇಖರ್ ಅಯೋಗ್ಯ ಸಿನಿಮಾದ ನಿರ್ಮಾಣದ ಜವಾಬ್ದಾರಿಯನ್ನು ಹೊತ್ತುಕೊಂಡರು. ಇನ್ನು ಮೋಹನ್ ಅವರ ಬಳಿ ಪಡೆದುಕೊಂಡಿದ್ದ 10 ಲಕ್ಷ ರೂಪಾಯಿಯನ್ನು ನಿರ್ದೇಶಕರು ಇಲ್ಲಿಯವರೆಗೂ ವಾಪಸ್ ನೀಡಿಲ್ಲವೆಂಬ ಆರೋಪವನ್ನು ಸದ್ಯ ಮೋಹನ್ ಮಾಡುತ್ತಿದ್ದಾರೆ. ಇದೊಂದೆ ಅಲ್ಲ ಬಹಳಷ್ಟು ಸಿನಿಮಾಗಳಿಂದ ತಮಗೆ ಮೋಸ ಆಗಿರುವುದಾಗಿಯೂ ಮೋಹನ್ ವಿಷಾದಿಸಿದ್ದಾರೆ. ಈ ಕುರಿತು ಅಯೋಗ್ಯ ಮಹೇಶ್ ರವರು ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ.

ಇನ್ನಷ್ಟು ಓದಿರಿ

Scroll to Top