`ಸಿಲಿಂಡರ್ ಸತೀಶ’ನಾದ ಕಿರಿಕ್ ಕೀರ್ತಿ!

Picture of Cinibuzz

Cinibuzz

Bureau Report

ಸೋಶಿಯಲ್ ಮೀಡಿಯಾದಲ್ಲಿ ಕಿರಿಕ್ ಕೀರ್ತಿಯಾಗಿ ಫೇಮಸ್ ಆಗಿದ್ದ ಕೀರ್ತಿ ಶಂಕರ ಘಟ್ಟ ಬಿಗ್ ಬಾಸ್ ಸೀಜನ್ 4ರ ಸ್ಪರ್ಧಿಯಾಗಿ ಅಂತಿಮ ಹಣಾಹಣಿಯವರೆಗೂ ಫಿನಾಲೆ ತಲುಪಿ ಕನ್ನಡಿಗರ ಮನಗೆದ್ದವರು. ಸಾಮಾಜಿಕ ಕಳಕಳಿ ಕೆಲಸಗಳ ಮೂಲಕ ತನ್ನನ್ನು ಗುರುತಿಸಿಕೊಂಡಿದ್ದ ಕೀರ್ತಿ ಬಿಗ್ ಬಾಸ್ ನಂತರ ಸಿನಿಮಾಗಳಲ್ಲೂ ಅಭಿನಯಿಸಲು ಪ್ರಾರಂಭಿಸಿದ್ದರು.

ಈಗಾಗಲೇ ಎರಡನೇ ಸಲ, ದೇವ್ರಂತ ಮನುಷ್ಯ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಟೈರು, ತಿರುಮಲ ವೈನ್ ಸ್ಟೋರ್ ನಲ್ಲಿ ನಟಿಸಿದ್ದು ಬಿಡುಗಡೆಯ ಹೊಸ್ತಿಲಿನಲ್ಲಿದ್ದಾರೆ. ಸದ್ಯ ಇವರ ನಟನೆಯ ಸಿಲಿಂಡರ್ ಸತೀಶ ಕೂಡ ರಿಲೀಸ್ ಗೆ ರೆಡಿಯಾಗಿದ್ದು, ಇತ್ತೀಚಿಗಷ್ಟೇ ಚಿತ್ರದ ಟೀಸರ್ ಬಿಡುಗಡೆ ಮಾಡಿಕೊಂಡಿದೆ. ಅಂದ ಹಾಗೆ ಈ ಚಿತ್ರದಲ್ಲಿ ಕಿರಿಕ್ ಕೀರ್ತಿ ಸಿಲಿಂಡರ್ ಅನ್ನು ಮನೆ ಮನೆಗೆ ತಲುಪಿಸುವ ಕೆಲಸಗಾರನಾಗಿ ಕಾಣಿಸಿಕೊಂಡಿದ್ದು, ಅವರಿಗೆ ಜೋಡಿಯಾಗಿ ‘ಪಾಪ ಪಾಂಡು’ ಶಾಲಿನಿ ಮತ್ತು ಸಂಗೀತಾ ನಟಿಸಿದ್ದಾರೆ. ಇದು ಜಾರಿ ಸ್ಟೋರಿಯಾಗಿರದೇ ನೋವಿನ ಸ್ಟೋರಿಯಾಗಿರಲಿದೆಯಂತೆ. ಈ ಸಿನಿಮಾವನ್ನು ಮಧುಸೂದನ್ ಶ್ರೀಕಾರ್ ನಿರ್ದೇಶನ ಮಾಡಿದ್ದಾರೆ.

ಇನ್ನಷ್ಟು ಓದಿರಿ

Scroll to Top