ಕವಲುದಾರಿಯ ಹುಡುಗನೀಗ ಸಕಲಾಕಲಾವಲ್ಲಭ!

Picture of Cinibuzz

Cinibuzz

Bureau Report

ಕವಲುದಾರಿ ಸಿನಿಮಾದ ಸಕ್ಸಸ್ ನಲ್ಲಿರುವ ರಿಷಿ, ಸಕಲಾಕಲಾವಲ್ಲಭ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈಗಾಗಲೇ ಚಿತ್ರೀಕರಣ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿರುವ ಸಕಲಕಲಾವಲ್ಲಭ ಸಿನಿಮಾವನ್ನು ಜಾಕೋಬ್ ವರ್ಗೀಸ್ ನಿರ್ದೇಶನ ಮಾಡುತ್ತಿದ್ದಾರೆ.

ಈ ಮೊದಲು ‘ಪೃಥ್ವಿ’, ‘ಚಂಬಲ್’ ಅಂತಹ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿರು ವರ್ಗೀಸ್ ಸೈಲೆಂಟ್ ಆಗಿ ‘ಸಕಲಕಲಾವಲ್ಲಭ’ ಚಿತ್ರ ಮಾಡಿ ಮುಗಿಸಿದ್ದಾರೆ. ಇನ್ನು ಚಿತ್ರದಲ್ಲಿ ನಟ ಸಾಯಿ ಕುಮಾರ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ವಿಶೇಷ ಅಂದ್ರೆ ರಿಷಿಗೆ ನಾಯಕಿಯಾಗಿ ಮಲಯಾಳಿ ಬೆಡಗಿ ರಿಬಾ ಮೋನಿಕಾ ಕಾಣಿಸಿಕೊಳ್ಳುತ್ತಿದ್ದಾರೆ.

ಇನ್ನಷ್ಟು ಓದಿರಿ

Scroll to Top