ರಾಬರ್ಟ್ ಗೆ ನಾಯಕಿ ಫಿಕ್ಸ್!

Picture of Cinibuzz

Cinibuzz

Bureau Report

ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟಿಸುತ್ತಿರುವ ರಾಬರ್ಟ್ ಸಿನಿಮಾ ಸೆಟ್ಟೇರಿದಾಗಿನಿಂದ ಚಿತ್ರಕ್ಕೆ ನಾಯಕಿ ಅವರು, ಇವರು, ಎಂಬಿತ್ಯಾದಿ ಡೌಟುಗಳು ಶುರುವಾಗಿದ್ದವು. ಐಶ್ವರ್ಯಾ ರೈನಿಂದ ಸಾಯಿ ಪಲ್ಲವಿ ಹೆಸರೂ ಬಂದು ಹೋಗಿತ್ತು. ಸದ್ಯ ರಾಬರ್ಟ್ ಸಿನಿಮಾ ನಾಯಕಿ ಯಾರೆಂಬುದು ರಿವೀಲ್ ಆಗಿದೆ.

ಹೌದು ರಾಬರ್ಟ್ ಗೆ ದರ್ಶನ್ ಗೆ ನಾಯಕಿಯಾಗಿ ಮೆಗ್ರೆನ್ ಕೌರ್ ಪಿರ್ಜಾಡಾ ನಟಿಸಲಿದ್ದಾರಂತೆ. ಬಾಲಿವುಡ್ ನ ಫಿಲ್ಲೌರಿ ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಪಡೆದಿರುವ ಅವರು, ಟಾಲಿವುಡ್‌ನಲ್ಲಿ ವಿಜಯ್ ದೇವರಕೊಂಡ ಜೊತೆ ‘ನೋಟಾ’ ಹಾಗೂ ಬಹುತಾರಾಗಣದ ‘ಎಫ್‌2’ ಚಿತ್ರದಲ್ಲೂ ನಟಿಸಿದ್ದಾರೆ. ತಮಿಳಿನಲ್ಲಿ ಧನುಷ್ ಜೊತೆ ಸಹ ತೆರೆ ಹಂಚಿಕೊಂಡಿರುವ ಮೆಹ್ರೆನ್ ಕೌರ್, ಇದೀಗ ಕನ್ನಡದ ಸ್ಟಾರ್ ನಟ ದರ್ಶನ್ ಸಿನಿಮಾದಲ್ಲಿ ಅವಕಾಶ ಪಡೆದಿದ್ದಾರೆ. ಸದ್ಯ ಮೆಹ್ರೆನ್ ಕೌರ್ ಅವರನ್ನು ನಾಯಕಿ ಪಾತ್ರಕ್ಕಾಗಿ ಚಿತ್ರತಂಡವು ಕಾಂಟ್ಯಾಕ್ಟ್ ಮಾಡಿದೆ. ಆದರೆ ಅವರನ್ನು ಚಿತ್ರಕ್ಕೆ ಫೈನಲ್ ಮಾಡಿರುವ ಬಗ್ಗೆ ಇನ್ನೂ ಅಧಿಕೃತ ನಿರ್ಧಾರ ಹೊರಬಂದಿಲ್ಲ.

ಇನ್ನಷ್ಟು ಓದಿರಿ

Scroll to Top