ತಮಿಳು ಪತ್ರಿಕೆಯಲ್ಲಿ ರಾಬರ್ಟ್ ಸುದ್ದಿ!

Picture of Cinibuzz

Cinibuzz

Bureau Report

ಸದ್ಯ ಕನ್ನಡ ಸಿನಿಮಾಗಳು ಭಾರತದಾದ್ಯಂತ ಮಾರುಕಟ್ಟೆಯನ್ನು ಸೃಷ್ಟಿಸಿಕೊಳ್ಳುತ್ತಿರುವ ಆರೋಗ್ಯಕರ ಬೆಳವಣಿಗೆ. ಕನ್ನಡ ಸಿನಿಮಾ ರಿಲೀಸ್ ಆಗಲಿದೆ ಎಂದು ಕರ್ನಾಟಕ ಮಾತ್ರವಲ್ಲದೇ, ದೇಶ, ವಿಶ್ವದಲ್ಲಿರುವ ಬಹುತೇಕ ಕನ್ನಡಿಗರು ಕಾಯುತ್ತ ಕೂರುವಂತಾಗಿದೆ. ಅದರಲ್ಲೂ ಕೆಜಿಎಫ್ ಸಿನಿಮಾ ಯಶಸ್ಸಿನ ನಂತರ ಕನ್ನಡ ಸಿನಿಮಾಗಳ ಮೇಲೆ ಪರಬಾಷಿಗರ ಕಣ್ಣು ಬಿದ್ದಿದೆ. ಈಗ ಕನ್ನಡ ಸಿನಿಮಾಗಳ ಕುರಿತಾಗಿ ಬೇರೆ ಬೇರೆ ಪರಭಾಷಾ ಪತ್ರಿಕೆಗಳಲ್ಲಿಯೂ ಸುದ್ದಿ ವರದಿಯಾಗುತ್ತಿದೆ.

ಸದ್ಯ ತಮಿಳು ಪತ್ರಿಕೆಯೊಂದರಲ್ಲಿ ರಾಬರ್ಟ್ ಸಿನಿಮಾದ ಪೋಸ್ಟರ್ ಕುರಿತಾಗಿ ಸುದ್ದಿ ಪ್ರಕಟವಾಗಿದೆ. ಈ ಸಿನಿಮಾ ಕನ್ನಡದಲ್ಲಿ ಮಾತ್ರ ರಿಲೀಸ್ ಆಗುತ್ತಿದ್ದರೂ ತಮಿಳು ಪತ್ರಿಕೆಯಲ್ಲಿ ವರದಿಯಾಗಿರುವುದು ವಿಶೇಷವಾಗಿದೆ. ಇನ್ನುಳಿದಂತೆ ತರುಣ್ ಸುಧೀರ್ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ಉಮಾಪತಿ ಶ್ರೀನಿವಾಸ್ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಈಗಾಗಲೇ ಶೂಟಿಂಗ್ ಶುರುವಾಗಿದ್ದು, ಮುಂದಿನ ವರ್ಷದ ಬೇಸಿಗೆಯಲ್ಲಿ ಸಿನಿಮಾ ರಿಲೀಸ್ ಆಗಲಿದೆ.

ಇನ್ನಷ್ಟು ಓದಿರಿ

Scroll to Top