ನಮ್ಮ ಗಣಿ ಬಿಕಾಂ ಪಾಸ್ ಶೂಟಿಂಗ್ ಕಂಪ್ಲೀಟ್!

Picture of Cinibuzz

Cinibuzz

Bureau Report

ಐಶಾನಿ ಶೆಟ್ಟಿ ನಟನೆಯ ನಮ್ಮ ಗಣಿ ಬಿಕಾಂ ಪಾಸ್ ಸಿನಿಮಾದ ಶೂಟಿಂಗ್ ಇತ್ತೀಚಿಗಷ್ಟೇ ಮುಗಿದಿದೆ. ಸದ್ಯ ಸಿನಿಮಾವೂ ಪೋಸ್ಟ್  ಪ್ರೊಡಕ್ಷನ್ ಹಂತದಲ್ಲಿದ್ದು, ಸದ್ಯದಲ್ಲಿಯೇ ಸಿನಿಮಾದ ಡಬ್ಬಿಂಗ್ ಕೆಲಸಗಳು ಶುರುವಾಗಲಿದೆ. ‘ನಮ್ ಗಣಿ ಬಿಕಾಂ ಪಾಸ್’ ಚಿತ್ರದಲ್ಲಿ ಎರಡು ಭಿನ್ನ ಶೇಡ್​ಗಳಲ್ಲಿ ಐಶಾನಿ ಕಾಣಿಸಿಕೊಂಡಿದ್ದು, ಒಂದರಲ್ಲಿ ಶಾಲಾ ಬಾಲಕಿಯಾದರೆ, ಇನ್ನೊಂದರಲ್ಲಿ ಪ್ರಬುದ್ಧ ಹುಡುಗಿಯ ಪಾತ್ರ ಮಾಡಿದ್ದಾರೆ. ನಾಯಕನಾಗಿ ನಟಿಸುವ ಜತೆಗೆ ಅಭಿಷೇಕ್ ಶೆಟ್ಟಿ ನಿರ್ದೇಶನದ ಜವಾಬ್ದಾರಿಯನ್ನು ಹೊತ್ತಿರುವುದು ವಿಶೇಷವಾಗಿದೆ. ಕಾಮಿಡಿ ಶೈಲಿಯಲ್ಲಿ ಮೂಡಿಬಂದಿರುವ ಈ ಸಿನಿಮಾದಲ್ಲಿ ಪ್ರೀತಿ, ಪ್ರೇಮ, ಸಂಬಂಧಗಳು, ಕುಟುಂಬದ ಜತೆ ಸಂದೇಶಾತ್ಮಕವಾದ ಚಿತ್ರವು ಇದಾಗಿರಲಿದೆ.

ಈ ಹಿಂದೆ ‘ಸೆಕೆಂಡ್ ಹಾಫ್’ ಚಿತ್ರಕ್ಕೆ ನಿರ್ಮಾಪಕರಾಗಿದ್ದ  ನಾಗೇಶ್​ ಕುಮಾರ್ ‘ಗಣಿ..’ ಚಿತ್ರಕ್ಕೂ ಬಂಡವಾಳ ಹೂಡಿದ್ದಾರೆ. ನಾಗರಾಜ್ ಛಾಯಾಗ್ರಹಣ, ಚಿತ್ರಕ್ಕೆ ಹಾಡುಗಳನ್ನು ಬರೆದು ಸಂಗೀತ ಸಂಯೋಜಿಸಿದ್ದಾರೆ ವಿಕಾಸ್ ವಸಿಷ್ಠ. ಪಲ್ಲವಿಗೌಡ, ಸುಚೇಂದ್ರ ಪ್ರಸಾದ್, ಜಹಂಗೀರ್, ಸುಧಾ ಬೆಳವಾಡಿ, ಮಂಜುನಾಥ ಹೆಗ್ಡೆ, ಶಂಕರ್ ಅಶ್ವತ್ಥ್, ದಿನೇಶ್ ಮಂಗಳೂರು, ಆಶಾರಾಣಿ ಮುಂತಾದ ತಾರಾಂಗಣ ಚಿತ್ರದಲ್ಲಿದೆ.

ಇನ್ನಷ್ಟು ಓದಿರಿ

Scroll to Top