ಭಾರತದಲ್ಲಿ ರಿಲೀಸ್ ಆಗಲಿದೆ ಮೆನ್ ಇನ್‌ ಬ್ಲ್ಯಾಂಕ್ 4

Picture of Cinibuzz

Cinibuzz

Bureau Report

ಹಾಲಿವುಡ್‌ ಸಿನಿಪ್ರಿಯರಲ್ಲಿ ಕುತೂಹಲ ಮೂಡಿಸಿರುವ ‘ಮೆನ್ ಇನ್ ಬ್ಲ್ಯಾಕ್’ ಸರಣಿಯ ನಾಲ್ಕನೇ ಭಾಗ ಶೀಘ್ರದಲ್ಲೇ ಭಾರತದಲ್ಲಿ ರಿಲೀಸ್ ಆಗಲಿದೆ.. ‘ಮೆನ್ ಇನ್ ಬ್ಲ್ಯಾಕ್: ಇಂಟರ್‌ನ್ಯಾಷನಲ್’ ಶೀರ್ಷಿಕೆಯಲ್ಲಿ ತೆರೆಗೆ ಬರಲಿರುವ ಈ ಸಿನಿಮಾ ಬಿಡುಗಡೆಗೂ ಮುನ್ನವೇ ಎರಡು ಟ್ರೇಲರ್‌ಗಳಿಂದ ಪ್ರೇಕ್ಷಕರಲ್ಲಿ ಸಿನಿಮಾದ ಬಗ್ಗೆ ಕುತೂಹಲ ಹುಟ್ಟುಹಾಕಿದೆ.

ಅಮೆರಿಕನ್ ಆಯಕ್ಷನ್ ಕಾಮಿಡಿ ಮತ್ತು ವಿಜ್ಞಾನದ ರೋಚಕ ಕಥೆಗಳನ್ನೊಳಗೊಂಡ ‘ಮೆನ್ ಇನ್ ಬ್ಲ್ಯಾಕ್’ ಸಿನಿಮಾ ಸರಣಿ 1997ರಲ್ಲಿ ಮೊದಲು ತೆರೆ ಕಂಡಿತ್ತು. ನಂತರ 2002, 2012ರಲ್ಲಿ ಸರಣಿಯೋಪಾದಿಯಲ್ಲಿ ತೆರೆಕಂಡ ಈ ಸಿನಿಮಾದ ನಾಲ್ಕನೇ ಭಾಗ ಜೂನ್ 14ರಂದು ಭಾರತದಲ್ಲಿ ತೆರೆ ಕಾಣಲಿದೆ. ಗ್ಯಾರಿ ಗ್ರೇ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ.

ಟೆಸ್ಸಾ ಥಾಮ್ಸನ್ ಮತ್ತು ಕ್ರಿಸ್ ಹೆಮ್ಸ್‌ವರ್ತ್‌ ಮುಖ್ಯ ಏಜೆಂಟರಾಗಿ ಈ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ.
ಏಜೆಂಟ್ ‘ಎಂ’ ಪಾತ್ರದಲ್ಲಿ ಟೆಸ್ಸಾ ಅಭಿನಯಿಸುತ್ತಿದ್ದಾರೆ. ಕೆಲಸದ ನಿಮಿತ್ತ ಲಂಡನ್‌ಗೆ ತೆರಳಿದಾಗ ಏಜೆಂಟ್ ‘ಎಚ್’ ಅರ್ಥಾತ್ ಕ್ರಿಸ್‌ ಹೆಮ್ಸ್‌ವರ್ತ್‌ನನ್ನು ಭೇಟಿಯಾಗುತ್ತಾಳೆ. ಅಲ್ಲಿ ಅವರಿಬ್ಬರು ಪುಟ್ಟ ಅನ್ಯಗ್ರಹ ಜೀವಿ ಜೊತೆ ಸೇರಿ ನಡೆಸುವ ಸಾಹಸ ಕಥೆಯೇ ಚಿತ್ರದ ಕಥಾಹಂದರವಾಗಿದೆ. ಪುಟ್ಟ ಅನ್ಯಗ್ರಹ ಜೀವಿಗೆ ಪಾಕಿಸ್ತಾನದ ಕಲಾವಿದ ಕುಮಾಲ್ ನಂಜನಿಯಾ ದನಿ ನೀಡಿರುವುದು ಚಿತ್ರಕ್ಕೆ ಪ್ರಮುಖ‌ ಆಕರ್ಷಣೆ.

ಇನ್ನಷ್ಟು ಓದಿರಿ

Scroll to Top