ಬಿ ಟೌನ್ ನಲ್ಲಿ ಬ್ಯುಸಿ ಇದ್ದಾರೆ ಗೂಗ್ಲಿ ಗಿಳಿ!

Picture of Cinibuzz

Cinibuzz

Bureau Report

ಸ್ಯಾಂಡಲ್ ವುಡ್ ನಲ್ಲಿ ಪಡ್ಡೆ ಹೈಕಳಿಗೆ ‘ಗೂಗ್ಲಿ’ ಹಾಕಿದ ನಟಿ ಕೃತಿ ಕರಬಂಧ. ಕನ್ನಡದ ಚಿತ್ರದ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ಅವರು, ಆನಂತರ ಕನ್ನಡದ ಸಿನಿಮಾಗಳಲ್ಲಿ ಕೆಲಸ ಮಾಡಿ ಪರಭಾಷೆಗಳಿಗೆ ಹಾರಿದರು. ಸದ್ಯ ಬಾಲಿವುಡ್ ನಲ್ಲಿ ಬ್ಯುಸಿಯಾಗಿರುವ ಕೃತಿ ಮೂರು ದೊಡ್ಡ ಹಿಂದಿ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

‘ಪಾಗಲ್‌ಪಂತಿ’ ಮತ್ತು ‘ಹೌಸ್‌ಫುಲ್ 4’ ಸಿನಿಮಾದಲ್ಲಿ ದೊಡ್ಡ ನಟರ ಜತೆಗೆ ಕೃತಿ ಅಭಿನಯಿಸುತ್ತಿದ್ದಾರೆ. ಈ ನಡುವೆ ಬಿಗ್ ಬಿ ಅಮಿತಾಭ್ ಬಚ್ಚನ್ ಜೊತೆಗೆ ‘ಚೆಹೆರೆ’ ಸಿನಿಮಾದಲ್ಲೂ ಕೃತಿ ನಟಿಸುತ್ತಿದ್ದಾರೆ. ಹಾಗೂ ಬಿಗ್ ಜತೆ ನಟಿಸಲು‌ ಉತ್ಸುಕರಾಗಿದ್ದಾರೆ. ಚೆಹೆರೆ ನಲ್ಲಿ ಇಮ್ರಾನ್‌ ಹಶ್ಮಿ ಕೃತಿಗೆ ನಾಯಕ.

ಇನ್ನಷ್ಟು ಓದಿರಿ

Scroll to Top