ಟ್ರೇಲರ್ ಮೂಲಕ ಜಬರ್ಧಸ್ ಎಂಟ್ರಿ ಪಡೆದ ಆರ್ಯ!

Picture of Cinibuzz

Cinibuzz

Bureau Report

“ಕಿಕ್ ಏರ್ಬೇಕು ಅಂದ್ರೆ ಕ್ವಾಟ್ರು ಬೇಕು.. ಈ ಒಂಟೀನ್ ಮುಟ್ಬೇಕು ಅಂದ್ರೆ ಮೀಟ್ರು ಬೇಕು” ಎಂದು ಮಾಸ್ ಡೈಲಾಗ್ ಹೊಡೆಯುತ್ತಾ ಜಬರ್ಧಸ್ತ್ ಎಂಟ್ರಿ ಹಾಕುತ್ತಿರುವ ಆರ್ಯ ಒಂಟಿ ಸಿನಿಮಾ ಮೂಲಕ ಧೂಳೆಬ್ಬಿಸಲು ರೆಡಿಯಾಗಿದ್ದಾರೆ. ಸದ್ದಿಲ್ಲದೇ ಶೂಟಿಂಗ್ ಮುಗಿಸಿಕೊಂಡು ಜುಲೈ ತಿಂಗಳಲ್ಲಿ ರಿಲೀಸ್ ಆಗುತ್ತಿರುವ ಒಂಟಿ ಚಿತ್ರವನ್ನು ಸಾಯಿರಾಂ ಕ್ರಿಯೇಷನ್ಸ್ ಬ್ಯಾನರ್ ನಲ್ಲಿ ಆರ್ಯ ಅವರೇ ನಿರ್ಮಾಣ ಮಾಡುತ್ತಿದ್ದಾರೆ. ಸಿನಿಮಾ ಬಿಡುಗಡೆ ಪೂರ್ವ ಇಂದು ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್ ನಲ್ಲಿ ಒಂಟಿ ಸಿನಿಮಾದ ಟ್ರೇಲರ್ ರಿಲೀಸ್ ಆಗಿದೆ. ಟ್ರೇಲರ್ ಉದ್ದಕ್ಕೂ ಪಂಚಿಂಗ್ ಡೈಲಾಗ್ ಮೂಲಕವೇ ಮಾಸ್ ಕಿಕ್ ಕೊಡುವ ಆರ್ಯ, ಹೈಟಿಗೆ ತಕ್ಕಂತೆ ಮಾಸ್ ಹೀರೋ ಆಗುವುದರಲ್ಲಿ ಡೌಟೇ ಇಲ್ಲ.

ಈ ಹಿಂದೆ ಪ್ರಶಾಂತ್ ನಟನೆಯ ಒರಟ ಐ ಲವ್ ಯು ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದ ಶ್ರೀ ಒಂಟಿ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಇನ್ನು ಈ ಸಂಜೆ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದ ಆರ್ಯ ಒಂಟಿ ಮೂಲಕ ನಿರ್ಮಾಪಕ ಕಮ್ ಹೀರೋ ಆಗಿ ಮಿಂಚಲು ರೆಡಿಯಾಗಿದ್ದಾರೆ. ಮೈ ಆಟೋಗ್ರಾಫ್, ನಂ 73 ಶಾಂತಿ ನಿವಾಸ ಸಿನಿಮಾಗಳಲ್ಲಿ ಸಣ್ಣಪುಟ್ಟ ಪಾತ್ರಗಳನ್ನು ಮಾಡಿದ್ದ ಆರ್ಯನಿಗೆ ನಾಯಕನಾಗಿ ಇದು ಎರಡನೇ ಸಿನಿಮಾ. ನಾಯಕಿಯಾಗಿ ಮೇಘನಾ ರಾಜ್ ಜತೆಯಾಗಿದ್ದು, ಉಳಿದಂತೆ ದೇವರಾಜ್, ಗಿರಿಜಾ ಲೋಕೇಶ್, ಶರತ್ ಲೋಹಿತಾಶ್ವ, ನೀನಾಸಂ ಅಶ್ವಥ್, ಮಜಾ ಟಾಕೀಸ್ ಪವನ್ ಇತರರು ತಾರಾಬಳಗದಲ್ಲಿದ್ದಾರೆ.

 

ಇನ್ನಷ್ಟು ಓದಿರಿ

Scroll to Top