ರಶ್ಮಿಕಾ ಬತ್ತಳಿಕೆಗೆ ಮತ್ತೊಂದು ಸಿನಿಮಾ!

Picture of Cinibuzz

Cinibuzz

Bureau Report

ಪ್ರಿನ್ಸ್ ಮಹೇಶ್ ಬಾಬು ಜತೆ ಸರಿಲೇರು ನೀಕೆವರು, ತಮಿಳಿನ ಕಾರ್ತಿ ಜೊತೆಯೊಂದು ಸಿನಿಮಾ, ಅಲ್ಲು ಅರ್ಜುನ್ ಚಿತ್ರದಲ್ಲೂ ನಾಯಕಿಯಾಗಿ ನಟಿಸುತ್ತಿರುವ ರಶ್ಮಿಕಾ ಟಾಲಿವುಡ್ ನಲ್ಲಿ ಬ್ಯುಸಿಯೋ ಬ್ಯುಸಿ.  ಇದೀಗ ರಶ್ಮಿಕಾ ಬತ್ತಳಿಕೆಗೆ ಮತ್ತೊಂದು ಸಿನಿಮಾ ಸೇರ್ಪಡೆಯಾಗಿದೆ.

ಹೌದು ರಶ್ಮಿಕಾ ನಿತೀನ್ ಜತೆ ಭೀಷ್ಮ ಸಿನಿಮಾದಲ್ಲಿ ನಟಿಸುತ್ತಿದ್ದು, ಇಂದು ಚಿತ್ರದ ಮಹೂರ್ತ ಕಾರ್ಯಕ್ರಮ ನೆರವೇರಿದೆ. ಭೀಷ್ಮ ಸಿನಿಮಾವನ್ನು ವೆಂಕಿ ಕುಡುಮುಲಾ ನಿರ್ದೇಶನ ಮಾಡುತ್ತಿದ್ದು, ಸೂರ್ಯದೇವರ ನಾಗವಂಶಿ ನಿರ್ಮಾಣ ಮಾಡುತ್ತಿದ್ದಾರೆ.

ಇನ್ನಷ್ಟು ಓದಿರಿ

Scroll to Top