ಮಲೈಕಾ ಧ್ಯಾನ ಭಂಗಿಯ ಫೋಟೋ ವೈರಲ್!

Picture of Cinibuzz

Cinibuzz

Bureau Report

ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಸಕ್ರಿಯರಾಗಿರುವ ನಟಿಮಣಿಯರ ಪೈಕಿ ಬಾಲಿವುಡ್ ನ ಮಲೈಕಾ ಅರೋರಾ ಪ್ರಮುಖರಾದವರು. ಇತ್ತೀಚಿಗೆ ಮಲೈಕ ಧ್ಯಾನದ ಭಂಗಿಯನ್ನು ಹೋಲುವ ಪೋಟೋವೊಂದನ್ನು ಇನ್ ಸ್ಟಾಗ್ರಾಂ ನಲ್ಲಿ ಶೇರ್ ಮಾಡಿದ್ದಾರೆ. ಈ ಫೋಟೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

ಇನ್ಸ್ಟಾಗ್ರಾಂನಲ್ಲಿ ಫೋಟ್ ಶೇರ್ ಮಾಡಿರುವ ಮಲೈಕಾ, ‘ಅಭ್ಯಾಸ ಮನುಷ್ಯನನ್ನು ಪರಿಪೂರ್ಣನನ್ನಾಗಿಸುತ್ತದೆ. ನನ್ನ ಕಾರ್ಯ ಪ್ರಗತಿಯಲ್ಲಿದೆ..’ ಎಂದು ಯೋಗದ ಭಂಗಿಗಳ ಕುರಿತು ಬರೆದುಕೊಂಡಿದ್ದಾರೆ. ಕೆಲವು ನೆಗೇಟಿವ್ ಕಮೆಂಟ್ ಗಳನ್ನು ಬಿಟ್ಟರೆ ಮಲೈಕಾಗೆ ಪ್ರಶಂಸೆಗಳ ಸುರಿಮಳೆಯೇ ಬಂದಿದೆ. ‘ನೀವು ಎಷ್ಟು ಫಿಟ್ ಆಗಿದ್ದೀರಿ, ನಿಮ್ಮ ಲೈಫ್ ಸ್ಟೈಲ್ ಚೆನ್ನಾಗಿದೆ, ನಮಗೂ ಈ ಕುರಿತು ಟಿಪ್ಸ್ ನೀಡಿರೆಂದು ಕೇಳಿಕೊಂಡಿದ್ದಾರೆ.

ಇನ್ನಷ್ಟು ಓದಿರಿ

Scroll to Top