ಅಪಘಾತದಿಂದ ಪಾರಾದ ತೆಲುಗು ಹೀರೋ!

Picture of Cinibuzz

Cinibuzz

Bureau Report

ಶೂಟಿಂಗ್ ಗಾಗಿ ತೆರಳುತ್ತಿದ್ದ ತೆಲುಗು ನಟ ವರುಣ್ ತೇಜ್ ಭೀಕರ ಅಪಘಾತದಿಂದ ಸ್ವಲ್ಪದರಲ್ಲೇ ಪಾರಾಗಿದ್ದಾರೆ.  ಮೆಗಾ ಹೀರೋ ವರುಣ್ ರಾಜ್ ವಾಲ್ಮೀಕಿ ಸಿನಿಮಾದ ಚಿತ್ರೀಕರಣಕ್ಕಾಗಿ ಯಗಂತಿಗೆ ಹೋಗುತ್ತಿದ್ದರು. ತೆಲಂಗಾಣದ ಕೊತಾಕೋಟದ ಬಳಿ ಎದುರಾಗಿ ಬರುತ್ತಿದ್ದ ಕಾರಿಗೆ ರಭಸವಾಗಿ ಡಿಕ್ಕಿ ಹೊಡೆದ ಪರಿಣಾಮವಾಗಿ ಸಂಭವಿಸಬೇಕಿದ್ದ ಅನಾಹುತದಿಂದ ಕೂದಲೆಳೆಯಲ್ಲಿ ಪಾರಾಗಿದ್ದಾರೆ.

ಕಾರಿನಲ್ಲಿದ್ದ ವರುಣ್ ತೇಜ್ ಮತ್ತು ಸ್ನೇಹಿತರು ಯಾವುದೇ ಅಪಾಯವಿಲ್ಲದೇ ಸುರಕ್ಷಿತರಾಗಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ವರುಣ್ ತೇಜ್ “ಯಾವುದೇ ಅಪಾಯವಾಗದೇ ಸುರಕ್ಷಿತವಾಗಿದ್ದೇನೆ. ನಿಮ್ಮ ಪ್ರೀತಿ, ಆದರಗಳಿಗೆ ಧನ್ಯವಾದ ತಿಳಿಸಿದ್ದಾರೆ”. ವರುಣ್ ತೇಜ್ ಎಫ್ 2 ಸಿನಿಮಾ ಯಶಸ್ಸಿನ ನಂತರ ಸದ್ಯ ವಾಲ್ಮೀಕಿ ಚಿತ್ರದಲ್ಲಿ ನಟಿಸುತ್ತಿದ್ದಾರೆ.

ಇನ್ನಷ್ಟು ಓದಿರಿ

Scroll to Top