ಮೌನಂ ಸಿನಿಮಾ ಹಿನ್ನೆಲೆ ಸಂಗೀತ ಮುಕ್ತಾಯ!

Picture of Cinibuzz

Cinibuzz

Bureau Report

ನಿಹಾರಿಕಾ ಮೂವೀಸ್ ಲಾಂಛನದಲ್ಲಿ ಶ್ರೀಹರಿ ನಿರ್ಮಿಸಿರುವ ‘ಮೌನಂ ಚಿತ್ರಕ್ಕೆ ಹಿನ್ನೆಲೆ ಸಂಗೀತ ಕಾರ್ಯ ಪೂರ್ಣಗೊಂಡಿದೆ. ಈ ಸಿನಿಮಾವನ್ನು ರಾಜ್ ಪಂಡಿತ್ ನಿರ್ದೆಶನ ಮಾಡುತ್ತಿದ್ದು, ಕಥೆ, ಚಿತ್ರಕತೆ, ಸಂಭಾಷಣೆಯ ಜವಾಬ್ದಾರಿಯೂ ಅವರದ್ದೇ. ಮನುಷ್ಯನಿಗೆ ಮನುಷ್ಯನೇ ಶತ್ರು, ನಾವೇ ನಮ್ಮ ಹೊರಗಡೆ ಇರುವ ಶತ್ರುವನ್ನು ಮಟ್ಟ ಹಾಕುವ ಮೊದಲು ನಮ್ಮೊಳಗಿರುವ ಶತ್ರುವನ್ನು ಮಟ್ಟಹಾಕಬೇಕು ಎನ್ನುವ ಎಳೆಯಲ್ಲಿಯೇ ಮೌನಂ ಕಥೆ ಹೆಣೆಯಲಾಗಿದೆ.

ಇನ್ನು ಆರು ಶೇಡ್ ಗಳಿರುವ ವಿಶಿಷ್ಟ ಪಾತ್ರದಲ್ಲಿ ಅವಿನಾಶ‍ ನಟಿಸಿದ್ದು, ಹೋಮ್ಲಿ ಹಾಗೂ ಆಕ್ಷನ್ ಲುಕ್ ನಲ್ಲಿ ಕೃಷ್ಣಲೀಲಾ ಮಯೂರಿ ಮಿಂಚಿದ್ದಾರೆ. ಉಳಿದಂತೆ ಅಮೃತವರ್ಷಿಣಿ ಧಾರವಾಹಿ ಖ್ಯಾತಿಯ ಬಾಲಾಜಿ ಶರ್ಮ, ಹನುಮಂತೇಗೌಡ, ರಿತೇಶ್, ಕೆಂಪೇಗೌಡ, ಗುಣವಂತ ಮಂಜು, ಕಾಮಿಡಿ ಕಿಲಾಡಿಗಳು ನಯನ, ಸಿಂಚನ, ಮಂಜುಳಾ ರೆಡ್ಡಿ ಮುಂತಾದವರಿದ್ದಾರೆ.

ಇನ್ನಷ್ಟು ಓದಿರಿ

Scroll to Top