ಸೀಕ್ರೆಟಾಗಿ ನಿಶ್ಚಿತಾರ್ಥ ಮುಗಿಸಿಕೊಂಡ ರೆಜಿನಾ!

Picture of Cinibuzz

Cinibuzz

Bureau Report

ಸೆಲೆಬ್ರೆಟಿಗಳ ಮದುವೆ ಅಂದ್ರೇನೆ ಹಂಗೆ. ಇಡೀ ಚಿತ್ರರಂಗವೆಲ್ಲಾ ಹಬ್ಬದಂತೆ ಕಂಗೊಳಿಸುತ್ತದೆ. ಸದ್ಯ ಟಾಲಿವುಡ್ ನಲ್ಲಿ ಇಂತಹುದೇ ಹಬ್ಬದ ವಾತಾವರಣ ಸೃಷ್ಟಿಯಾಗುವ ಸಾಧ್ಯತೆ ಇದೆ. ಹೌದು ಟಾಲಿವುಡ್ ನ ಬ್ಯೂಟಿ ಕ್ವೀನ್ ರೆಜಿನಾ ಶೀಘ್ರದಲ್ಲಿಯೇ ವಿವಾಹವಾಗಲಿದ್ದಾರೆ.

ಈಕೆಯ ವಿವಾಹ ಸಮಾರಂಭ ಸೀಕ್ರೆಟಾಗಿ ಜೂನ್ 13, 2019ರಂದು ನಡೆದಿದ್ದು, ಸದ್ಯದಲ್ಲಿಯೇ ಮದುವೆ ದಿನಾಂಕವನ್ನು ಅನೌನ್ಸ್ ಮಾಡಲಾಗುವುದಂತೆ. ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಗುರುತಿಸಿಕೊಂಡಿರುವ ರೆಜಿನಾ ಸೋನಂ ಕಪೂರ್ ಮತ್ತು ಅನಿಲ್ ಕಪೂರ್ ಅಭಿನಯದ ಎಕ್ ಲಡಕಿ ಕೋ ದೇಖಾ ತೋ ಐಸಾ ಲಗಾ ಎಂಬ ಸಿನಿಮಾದಲ್ಲಿ ನಟಿಸಿ ಬಾಲಿವುಡ್ ನಲ್ಲಿಯೂ ಚಿರಪರಿಚಿತರಾಗಿದ್ದಾರೆ.

ಇನ್ನಷ್ಟು ಓದಿರಿ

Scroll to Top