ಜೂನ್ 21ಕ್ಕೆ ಸಾರ್ವಜನಿಕರಿಗೆ ಸುವರ್ಣಾವಕಾಶ ಟೀಸರ್!

Picture of Cinibuzz

Cinibuzz

Bureau Report

ಅಲಮೇಲಮ್ಮನ ಆಪರೇಷನ್ ಮಾಡಿಸಿ ಕವಲುದಾರಿಯಲ್ಲಿ ಮತ್ತೇನನ್ನೋ ಹುಡುಕುತ್ತಿದ್ದ ರಿಷಿ, ಈಗ ಸಾರ್ವಜನಿಕರಿಗೊಂದು ಸುವರ್ಣಾವಕಾಶ ನೀಡಲು ಮುಂದಾಗಿದ್ದಾರೆ. ಹೌದು ರಿಷಿ ಅಭಿನಯಿಸುತ್ತಿರುವ ಹೊಸ ಚಿತ್ರದ ಹೆಸರು ಇದಾಗಿದ್ದು, ಇದೇ ಜೂನ್ 21 ರಂದು ಚಿತ್ರತಂಡ ಟೀಸರ್ ಬಿಡುಗಡೆ ಮಾಡಲು ಸಿದ್ದತೆ ಮಾಡಿಕೊಳ್ಳುತ್ತಿದೆ.

ಗುಲ್ಟು ಸಿನಿಮಾದಲ್ಲಿ ಕಾರ್ಯನಿರ್ವಹಿಸಿದ್ದ ತಾಂತ್ರಿಕ ವರ್ಗವೇ ಈ ಚಿತ್ರದಲ್ಲಿಯೂ ಕಾರ್ಯನಿರ್ವಹಿಸಿರುವುದು ವಿಶೇಷವಾಗಿದೆ. ಸಾರ್ವಜನಿಕರಿಂದ ಸುವರ್ಣಾವಕಾಶ ಸಿನಿಮಾವನ್ನು ಅನೂಪ್ ರಾಮಸ್ವಾಮಿ ಕಶ್ಯಪ್ ನಿರ್ದೇಶನ ಮಾಡುತ್ತಿದ್ದು, ಪ್ರಶಾಂತ್ ರೆಡ್ಡಿ, ದೇವರಾಜ್ ಆರ್ ಹಾಗೂ ಜನಾರ್ಧನ್ ಚಿಕ್ಕಣ್ಣ ನಿರ್ಮಾಣ ಮಾಡುತ್ತಿದ್ದಾರೆ. ರಿಷಿಗೆ ಕನ್ನಡದ ಹುಡುಗಿ ಧನ್ಯಾ ಜತೆಯಾಗಿದ್ದಾರೆ.

ಇನ್ನಷ್ಟು ಓದಿರಿ

Scroll to Top