ರಮೇಶ್ ಚಿತ್ರಕ್ಕೆ ಜೋಶ್ ಖ್ಯಾತಿಯ ಪೂರ್ಣ ನಾಯಕಿ!

Picture of Cinibuzz

Cinibuzz

Bureau Report

ಸದ್ಯ ಬಟರ್ ಪ್ಲೈ ಹಾರಿಸುತ್ತಿರುವ ರಮೇಶ್ ಅರವಿಂದ್ ಮತ್ತೊಂದು ಚಿತ್ರದ ಕಡೆ ಮುಖ ಮಾಡಿದ್ದಾರೆ. ಸುವರ್ಣ ಸುಂದರಿ ಪೂರ್ಣ ಅವರನ್ನು ನಾಯಕಿಯಾಗಿ ಆ ಸಿನಿಮಾಕ್ಕೆ ಆಯ್ಕೆಯೂ ಮಾಡಿಕೊಂಡಿದ್ಧಾರೆ. ವಿಶೇಷವೆಂದರೆ ಈ ಚಿತ್ರದಲ್ಲಿಯೂ ನಿರ್ದೇಶನದ ಜತೆಗೆ ನಟನೆಯನ್ನು ಮಾಡಲಿದ್ದಾರೆ ತ್ಯಾಗರಾಜ.

ಸೋಶಿಯಲ್ ಮೀಡಿಯಾ ಮತ್ತು ಇಬ್ಬರು ಹೆಂಗಸರ ನಡುವೆ ನಡೆಯುವ ಕಥೆ ಇದಾಗಿದ್ದು ಈಗಾಗಲೇ ರಚಿತಾ ರಾಂ ಅವರನ್ನು ಮೊದಲನೇ ನಾಯಕಿಯಾಗಿಯೂ ಚ್ಯೂಸ್ ಮಾಡಲಾಗಿದೆ. ಪುಷ್ಬಕ ವಿಮಾನ ಚಿತ್ರದಲ್ಲಿ ರಚಿತಾ ರಾಮ್ ಮತ್ತು ರಮೇಶ್ ಅರವಿಂದ ಒಂದಾಗಿ ನಟಿಸಿದ್ದು, ಇದು ಈ ಜೋಡಿಯ ಎರಡನೇ ಸಿನಿಮಾ ಕೂಡ.

ಇನ್ನಷ್ಟು ಓದಿರಿ

Scroll to Top