ಹ್ಯಾಟ್ರಿಕ್ ಹೀರೋ ಸಿಡಿಸಿದ ಎ.ಕೆ.47 ಗೆ 20 ವರ್ಷ!

Picture of Cinibuzz

Cinibuzz

Bureau Report

“ಎದೆ ಹಾಲುಂಡು ಎದೆ ಬಗೆದವರ ಕ್ಷಮಿಸುವುದುಂಟೆ, ಬೆಳೆಸುವುದುಂಟೆ” ಅನ್ನೋ ಸಾಲು ಸಾರ್ವಕಾಲಿಕವಾಗಿ ಪ್ರತಿಯೊಬ್ಬ ಭಾರತೀಯನ ಕರ್ಣನಾದಗೊಳ್ಳುವಂತದ್ದು. ಇದು ಕನ್ನಡದ ಆ್ಯಕ್ಷನ್ ಎ.ಕೆ. 47 ಸಿನಿಮಾದ ಹಾಡು. ಈ ಹಾಡನ್ನು ನಾದಬ್ರಹ್ಮ ಹಂಸಲೇಖ ರಚಿಸಿದ್ದರು. ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಮತ್ತು ಓಂ ಪ್ರಕಾಶ್ ರಾವ್ ಕಾಂಬಿನೇಷನ್ನಿನ ಬೆಸ್ಟ್ ಸಿನಿಮಾಗಳ ಪೈಕಿ ಎ.ಕೆ. 47 ಪ್ರಮುಖವಾದದ್ದು. ಅಲ್ಲದೇ ಇದು ಶಿವರಾಜ್ ಕುಮಾರ್ ಅವರ ಕೆರಿಯರ್ ನ ಟಾಪ್ ರೇಟೆಡ್ ಸಿನಿಮಾ ಕೂಡ.

ಜೂನ್ 18, 1999ರಂದು ರಿಲೀಸ್ ಭಾಗ್ಯ ಕಂಡಿದ್ದ ಈ ಸಿನಿಮಾ ಜೂನ್ 18ಕ್ಕೆ ಬಿಡುಗಡೆಯಾಗಿ ಬರೋಬ್ಬರಿ 20 ವರ್ಷ ಕಳೆಯಲಿದೆಯಂತೆ. ಸಿಂಹದ ಮರಿ ಚಿತ್ರದಲ್ಲಿ ಜತೆಯಾಗಿದ್ದ ಶಿವಣ್ಣ ಮತ್ತು ಓಂ ಪ್ರಕಾಶ್ ಜೋಡಿ ಆನಂತರ ಎ.ಕೆ 47 ಮೂಲಕ ಮತ್ತೊಮ್ಮೆ ಚಂದನವನದಲ್ಲಿ ಕಮಾಲು ಮಾಡಿತ್ತು. ಕನ್ನಡ ಹಾಗೂ ತೆಲುಗು ಭಾಷೆಯಲ್ಲಿ ಈ ಸಿನಿಮಾ ರಿಲೀಸ್ ಆಗಿ, ಆ ಕಾಲದಲ್ಲಿಯೇ 175 ದಿನ ಯಶಸ್ವಿ ಪ್ರದರ್ಶನವನ್ನು ಕಂಡಿತ್ತು. ಇನ್ನು ತಾರಾಂಗಣದಲ್ಲಿ ಎ ಖ್ಯಾತಿಯ ಚಾಂದಿನಿ, ಬಾಲಿವುಡ್ ನಟ ಓಂ ಪುರಿ ಅಭಿನಯಿಸಿದ್ದರು. ಎ.ಕೆ. 47 ನಟನೆಗಾಗಿ ಶಿವರಾಜ್ ಕುಮಾರ್ ಫಿಲ್ಮ್ ಫೇರ್ ಪ್ರಶಸ್ತಿಯನ್ನು ಬಾಚಿಕೊಂಡಿದ್ದರು. ಎ.ಕೆ. 47 ಚಿತ್ರವನ್ನು ರಾಮು ತಮ್ಮ ಬ್ಯಾನರ್ ನಲ್ಲಿ ನಿರ್ಮಿಸಿ ನಿರೀಕ್ಷೆಗೂ ಮೀರಿದ ಲಾಭ ಗಳಿಸಿದ್ದರು.

ಇನ್ನಷ್ಟು ಓದಿರಿ

Scroll to Top