ಡ್ರೆಸ್ ನಿಂದ ಟ್ರೋಲಾದ ಮಲೈಕಾ!

Picture of Cinibuzz

Cinibuzz

Bureau Report

ಇತ್ತೀಚಿನ ದಿನಗಳಲ್ಲಿ ಮಲೈಕಾ ತನ್ನ ವೈಯಕ್ತಿಕ ವಿಚಾರಗಳಿಂದಲೇ ಸೋಶಿಯಲ್ ಮೀಡಿಯಾ ಪೇಜುಗಳಲ್ಲಿ ರಾರಾಜಿಸುತ್ತಿದ್ದಾರೆ. ಅರ್ಜುನ್ ಕಪೂರ್ ಜತೆ ಮಲೈಕಾ ಮದುವೆಯಾಗುತ್ತದೆ ಎಂಬ ಸುದ್ದಿ ಸಾಕಷ್ಟು ಚರ್ಚೆಗೂ ಒಳಪಟ್ಟಿತ್ತು. ಆದರೆ ಆ ಸುದ್ದಿಗಳನ್ನು ಗಾಳಿಗೆ ತೂರಿದ್ದ ಮಲೈಕಾ ತನ್ನ ಮಗನೊಂದಿಗೆ ಮಸ್ತ್ ಮಜಾ ಮಾಡುತ್ತಿದ್ದಾರೆ. ಇತ್ತೀಚಿಗೆ ಮಲೈಕಾ ಮತ್ತು ಮಗನ ಜತೆಗಿರುವ ಪೋಟೋ ಒಂದು ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.

ಮುಂಬೈ ರೆಸ್ಟೋರೆಂಟ್ ಮುಂದೆ ಮಲೈಕಾ ತನ್ನ 16 ವರ್ಷದ ಮಗನೊಂದಿಗೆ ಕಾಣಿಸಿಕೊಂಡಿದ್ದಾರೆ. ಬಿಳಿ ಬಣ್ಣದ ಡ್ರೆಸ್ ಧರಿಸಿರುವ ಅವರು, ಟ್ರೋಲಿಗರಿಗೆ ಆಹಾರವೂ ಆಗಿದ್ದಾಳೆ. ಮಲೈಕಾ ಡ್ರೆಸ್ ಬಗ್ಗೆ ಸಾಕಷ್ಟು ನೆಗೆಟೀವ್ ಕಮೆಂಟ್ ಬರುತ್ತಿದ್ದು, ಮಗನ ಮುಂದೆಯಾದರೂ ಸರಿಯಾದ ಡ್ರೆಸ್ ಧರಿಸು ಎಂದು ಕೆಲವರು ಸಜೆಸ್ಟ್ ಮಾಡಿದ್ದಾರೆ.

ಇನ್ನಷ್ಟು ಓದಿರಿ

Scroll to Top