ಸೈಫ್ ಮಗ ತೈಮೂರ್ ಫೋಟೋ ವೈರಲ್!

Picture of Cinibuzz

Cinibuzz

Bureau Report

ತಂದೆ ತಾಯಿಯ ಎಫೆಕ್ಟಿನಿಂದ ಹುಟ್ಟಿನಿಂದಲೂ ಸೋಶಿಯಲ್ ಮೀಡಿಯಾದಲ್ಲಿ ಒಂದಿಲ್ಲೊಂದು ವಿಚಾರಕ್ಕೆ ಸುದ್ದಿಯಾಗುವ ಸೈಫ್ ಆಲಿಖಾನ್ ದಂಪತಿ ಮಗ ತೈಮೂರ್ ಮತ್ತೆ ಸುದ್ದಿಯಾಗಿದ್ದಾರೆ.

https://www.instagram.com/p/ByzM91xlr4b/?utm_source=ig_web_copy_link

ಭಾನುವಾರ ಪಾಕ್ ವಿರುದ್ಧ ನಡೆದ ವಿಶ್ವಕಪ್ ಪಂದ್ಯದಲ್ಲಿ ಭಾರತ 89 ರನ್ ಗಳ ಭರ್ಜರಿ ಜಯವನ್ನು ಸಂಭ್ರಮಿಸಿದ ತೈಮೂರ್ ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಭಾರತದ ನೀಲಿ ಬಣ್ಣದ ಬಟ್ಟೆಯನ್ನು ಧರಿಸಿ ಸೆಲ್ಯೂಟ್ ಹೊಡೆಯುತ್ತಿರುವ ಫೋಟೋ ಎಲ್ಲರ ಗಮನ ಸೆಳೆಯುತ್ತಿದೆ. ಈಗಾಗಲೇ ಸೆಲೆಬ್ರಿಟಿಯಾಗಿರುವ ತೈಮೂರ್ ಇದೀಗ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾನೆ. ಕರೀನಾ ಟ್ವೀಟ್ ಮಾಡಿದ ಪೋಟೋದಲ್ಲಿಒಂದು ಪ್ರೀತಿ, ಒಂದು ಹೃದಯ ಭಾರತಕ್ಕಾಗಿಎಂದು ಬರೆದುಕೊಂಡಿದ್ದಾರೆ. ರಜೆಯಲ್ಲಿರುವ ತೈಮೂರ್ ಇದೀಗ ತಾಯಿ ಕರೀನಾ ಕಪೂರ್ ಜತೆ ಲಂಡನ್ ನಲ್ಲಿ ಪ್ರವಾಸದ ಖುಷಿಯಲ್ಲಿದ್ಧಾನೆ.

ಇನ್ನಷ್ಟು ಓದಿರಿ

Scroll to Top