ಹಿಂದಿ ಕಲಿಯುತ್ತಿದ್ದಾರೆ ಸನ್ನಿಲಿಯೋನ್!

Picture of Cinibuzz

Cinibuzz

Bureau Report

ಕಾಮಿಡಿ ಮತ್ತು ಹಾರರ್ ಜಾನರ್ ನ ಸಿನಿಮಾ ಕೋಕೋ ಕೋಲಾಗೆ ಸನ್ನಿಲಿಯೋನ್ ಉತ್ತರ ಪ್ರದೇಶದ ನೆಲದ ಸೊಗಡಿನ ಹಿಂದಿ ಕಲಿಯುತ್ತಿದ್ಧಾರಂತೆ. ಹೌದು ಕಥೆ ಪೂರ್ಣ ಉತ್ತರ ಪ್ರದೇಶದಲ್ಲಿ ನಡೆಯುವುದರಿಂದ ಸನ್ನಿ ಲಿಯೋನ್ಗೆ ಸ್ಥಳೀಯ ಶೈಲಿಯಲ್ಲಿ ಹಿಂದಿ ಮಾತನಾಡುವ ಪಾಠ ಆರಂಭಿಸಲಾಗಿದೆ.

ಉಳಿದೆಡೆ ಮಾತನಾಡುವ ಹಿಂದಿಗಿಂತ ಉತ್ತರ ಪ್ರದೇಶದ ಗ್ರಾಮೀಣ ಪ್ರದೇಶಗಳಲ್ಲಿ ಮಾತನಾಡುವ ಹಿಂದಿ ತುಸು ಡಿಫರೆಂಟ್ ಆಗಿದ್ದು, ಹೊಸ ಸಾಹಸಕ್ಕೆ ಸನ್ನಿ ಕೈ ಹಾಕಿರುವುದು ಎಲ್ಲರಿಗೂ ಅಚ್ಚರಿ ಮೂಡಿಸುತ್ತಿದೆ. ಲೋಕಲ್ ಹಿಂದಿ ಸ್ಲಾಂಗ್ ತುಸು ಕಷ್ಟವಾದರೂ ಎಂಜಾಯ್ ಮಾಡುತ್ತ ಕಲಿಯುತ್ತಿರುವುದಾಗಿಯೂ ಸನ್ನಿ ಹೇಳಿಕೊಂಡಿದ್ದಾರೆ. ರಂಗೀಲಾ ಮತ್ತು ವೀರ ಮಹಾದೇವಿ ಚಿತ್ರಗಳ ಮೂಲಕ ದಕ್ಷಿಣ ಭಾರತದ ಚಿತ್ರರಂಗಕ್ಕೂ ಎಂಟ್ರಿ ಕೊಟ್ಟಿರುವ ಸನ್ನಿ ಅಲ್ಲಿಯ ಭಾಷೆ, ಸಂಸ್ಖೃತಿಯನ್ನು ಮೆಚ್ಚಿಕೊಂಡಿದ್ದಾರೆ.

ಇನ್ನಷ್ಟು ಓದಿರಿ

Scroll to Top