ಸಲ್ಲು ವರ್ಕ್ ಔಟ್ ವಿಡಿಯೋ ವೈರಲ್!

Picture of Cinibuzz

Cinibuzz

Bureau Report

ಸೆಲೆಬ್ರೆಟಿಗಳು ಪ್ರತಿ ಸಿನಿಮಾಗಳಲ್ಲೂ ಫಿಟ್ ಅಂಡ್ ಫೈನ್ ಆಗಿ ಕಾಣಿಸಿಕೊಳ್ಳಲು ಜಿಮ್ ನಲ್ಲಿ ಬೆವರಿಳಿಸುವ ಸಂಪ್ರದಾಯವನ್ನು ರೂಢಿಸಿಕೊಂಡಿಸಿರುತ್ತಾರೆ. 53 ವರ್ಷವಾದರೂ ಫಿಟ್ನೆಸ್ ಕಾಯ್ದುಕೊಂಡಿರುವ ಸಲ್ಲು ಪ್ರತಿದಿನವೂ ಜಿಮ್ ಗೆ ತಪ್ಪದೇ ಹಾಜರಾಗುತ್ತಾರೆ. ಇತ್ತೀಚಿಗೆ ಸಲ್ಮಾನ್ ಖಾನ್ ಅವರ ವರ್ಕ್ ಔಟ್ ವಿಡಿಯೋ ವೈರಲ್ ಆಗಿದೆ. ತಮ್ಮ ಬಾಡಿಗಾರ್ಡ್ಸ್ ಜತೆ ಸಲ್ಮಾನ್ ಖಾನ್ ವರ್ಕ್ ಔಟ್ ಮಾಡುತ್ತಿರುವ ಶೈಲಿ ಅಭಿಮಾನಿಗಳಿಗೆ ಅಚ್ಚರಿ ಉಂಟು ಮಾಡಿದೆ.

ದೊಡ್ಡ ವೈಟ್ ಪ್ಲೇಟ್ಸ್ ಇದ್ದರೂ, ಅದರ ಜೊತೆಗೆ ತಮ್ಮ ಇಬ್ಬರು ಬಾಡಿಗಾರ್ಡ್ಸ್ ಗಳ ಭಾರವನ್ನು ಹೊತ್ತು ವರ್ಕ್ ಔಟ್ ಮಾಡುತ್ತಿದ್ದಾರೆ. ಈ ವಿಡಿಯೋವನ್ನು ಅವರೇ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಚಿಕೊಂಡಿದ್ದಾರೆ. ಸಲ್ಮಾನ್ ಅವರ ಆ ವಿಡಿಯೋ 38 ಲಕ್ಷಕ್ಕೂ ಹೆಚ್ಚು ಬಾರಿ ನೋಡಲಾಗಿದೆ. ಸಾವಿರಾರೂ ಅಭಿಮಾನಿಗಳ ಲೈಕ್ ಹಾಗೂ ಕಾಮೆಂಟ್ಸ್ ಈ ವಿಡಿಯೋಗೆ ಸಿಕ್ಕಿದೆ. ಸಲ್ಮಾನ್ ಖಾನ್ ಈ ರೀತಿಯ ವರ್ಕ್ ಔಟ್ ನೋಡಿ ಅನೇಕರು ಬೆರಗಾಗಿದ್ದಾರೆ.

ಇನ್ನಷ್ಟು ಓದಿರಿ

Scroll to Top