ಸದ್ದು ಮಾಡುತ್ತಿದೆ ಅಮಲಾ ಆಡೈ ಟೀಸರ್!

Picture of Cinibuzz

Cinibuzz

Bureau Report

ಸಾಕಷ್ಟು ವಿವಾದಾತ್ಮಕ ವಿಚಾರಗಳಿಂದಲೇ ಸದ್ದು ಮಾಡುವ ಅಮಲಾ ಪೌಲ್ ಟೀಸರ್ ನಿಂದ ಸುದ್ದಿಯಾಗಿದ್ದಾರೆ. ಹೌದು ಆಡೈ ಚಿತ್ರದ ಟೀಸರ್ ವೊಂದರಲ್ಲಿ ಪೊಲೀಸ್ ವಿಚಾರಣೆ ವೇಳೆ ಅಮಲಾ ಪೌಲ್ ಅವರನ್ನು ಅರೆನಗ್ನವಾಗಿ ಬಿಂಬಿಸಿರುವ ಸೀನು ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಈಗಾಗಲೇ 7 ಲಕ್ಷಕ್ಕೂ ಅಧಿಕ ಹಿಟ್ಸ್ ಪಡೆದುಕೊಂಡಿರುವ ಈ ಟೀಸರ್ ಟ್ರೋಲಿಗರಿಗೆ ಎಲೆ ಅಡಿಕೆಯಾಗುವ ಎಲ್ಲ ಲಕ್ಷಣಗಳೂ ಕಾಣುತ್ತಿವೆ.

ಈ ಚಿತ್ರದಲ್ಲಿ ಅಮಲಾ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದು, ಈ ಟೀಸರನ್ನು ನಿರ್ಮಾಪಕ ಕಮ್ ನಿರ್ದೇಶಕ ಕರಣ್ ಜೋಹರ್ ರಿಲೀಸ್ ಮಾಡಿದ್ದಾರೆ. ಕಾಣೆಯಾದ ಮಗುವನ್ನು ಹುಡುಕುವ ತಾಯಿ ಏನೆಲ್ಲಾ ಕಷ್ಟ ನಷ್ಟಗಳನ್ನು ಅನುಭವಿಸುತ್ತಾಳೆ ಎಂಬುದೇ ಆಡೈ ಕಥಾ ಹಂದರ. ಸದ್ಯದಲ್ಲೇ ಸಿನಿಮಾ ರಿಲೀಸ್ ಆಗುವ ಸಾಧ್ಯತೆ ಇದೆ.

ಇನ್ನಷ್ಟು ಓದಿರಿ

Scroll to Top