ಜೋಯಾ ಫ್ಯಾಕ್ಟರ್ ಗೆ ಯು ಪ್ರಮಾಣ ಪತ್ರ!

Picture of Cinibuzz

Cinibuzz

Bureau Report

ಸೋನಂ ಕಪೂರ್ ಮತ್ತು ದುಲ್ಕರ್ ಸಲ್ಮಾನ್ ಅಭಿನಯದ ಬಹು ನಿರೀಕ್ಷಿತ ಚಿತ್ರ ‘ಜೋಯಾ ಫ್ಯಾಕ್ಟರ್‌’ಗೆ ಸೆನ್ಸಾರ್ ಮಂಡಳಿ ‘ಯು’ ಪ್ರಮಾಣಪತ್ರ ನೀಡಿದೆ. ಸೋನಂ ಮತ್ತು ದುಲ್ಕರ್ ನಡುವಣ ಆತ್ಮೀಯ ಸೀನುಗಳಿದ್ದು, ಇದಕ್ಕಾಗಿಯೇ ಚಿತ್ರಕ್ಕೆ ‘ಯು’ ಪ್ರಮಾಣ ಪತ್ರ ನೀಡಲಾಗಿದೆ. ಲೇಖಕಿ ಅನುಜಾ ಚೌಧರಿ ಅವರ ಕಾದಂಬರಿ ಆಧರಿಸಿ ತಯಾರಾಗಿರುವ ಚಿತ್ರ ಇದಾಗಿದ್ದು, ಮಾಲಿವುಡ್ ನಲ್ಲಿ ಜನಪ್ರಿಯತೆ ಗಳಿಸಿರುವ ನಟ ದುಲ್ಕರ್ ಜತೆಗೆ ಸೋನಂ ಮೊದಲ ಬಾರಿಗೆ ನಟಿಸುತ್ತಿದ್ದಾರೆ. ಇನ್ನು ಸೋನಂ ತಂದೆ ಪಾತ್ರದಲ್ಲಿ ಚಿಕ್ಕಪ್ಪ ಸಂಜಯ್ ಕಪೂರ್ ನಟಿಸುತ್ತಿರುವುದು ಚಿತ್ರಕ್ಕೆ ಪ್ಲಸ್ ಆಗಲಿದೆ.

ಚಿತ್ರದಲ್ಲಿ ಸೋನಂ ಜೋಯಾ ಸಿಂಗ್ ಸೋಲಂಕಿ ಅನ್ನುವ ಜಾಹೀರಾತು ಎಕ್ಸಿಕ್ಯೂಟಿವ್ ಪಾತ್ರದಲ್ಲಿಯೂ ದುಲ್ಕರ್ ಭಾರತ ಕ್ರಿಕೆಟ್ ತಂಡದ ನಾಯಕನ ಪಾತ್ರದಲ್ಲಿಯೂ ಕಾಣಿಸಿಕೊಂಡಿದ್ದಾರೆ. ಸೋನಂ ಅಭಿನಯದ ‘ಏಕ್ ಲಡ್ಕಿ ಕೋ ದೇಖಾ ತೋ ಐಸಾ ಲಾಗಾ’ ಸಿನಿಮಾ ಬಾಕ್ಸ್‌ ಆಫೀಸಿನಲ್ಲಿ ಅಷ್ಟಾಗಿ ಯಶಸ್ಸು ಗಳಿಸದಿದ್ದರೂ ಸಲಿಂಗ ಪ್ರೇಮದ ಕಥೆಯನ್ನೊಳಗೊಂಡಿದ ಈ ಸಿನಿಮಾ ಭಿನ್ನ ಕಥಾವಸ್ತುವಿಗಾಗಿ ವಿಮರ್ಶಕರ ಮೆಚ್ಚುಗೆಗೆ ಪಾತ್ರವಾಗಿತ್ತು.

ಇನ್ನಷ್ಟು ಓದಿರಿ

Scroll to Top