ಪಿಯುಸಿ ಹುಡುಗಿ ಏಕ್ ಲವ್ ಯಾಗೆ ನಾಯಕಿ!

Picture of Cinibuzz

Cinibuzz

Bureau Report

ಸದಾ ಒಂದಿಲ್ಲೊಂದು ಆವಿಷ್ಕಾರಗಳನ್ನು ಮಾಡುವ ನಿರ್ದೇಶಕ ಪ್ರೇಮ್ ನಾಯಕಿಯರ ವಿಚಾರದಲ್ಲಿಯೂ ಭಿನ್ನತೆಯನ್ನು ಕಾಯ್ದುಕೊಂಡಿದ್ದಾರೆ. ತಮ್ಮ ಬಹುತೇಕ ಚಿತ್ರಗಳಿಗೆ ಹೊಸ ಹೊಸ ಮುಖಗಳನ್ನೇ ಹೆಚ್ಚು ಪರಿಚಯಿಸುವ ಪ್ರೇಮ್ ಸದ್ಯ ಏಕ್ ಲವ್ ಯಾ ಚಿತ್ರಕ್ಕೂ ಹೊಸ ನಾಯಕಿಯನ್ನು ಹುಡುಕಿ ತಂದಿದ್ದಾರೆ. ಹೌದು 18 ವರ್ಷದ ರೀಷ್ಮಾ ನಾಣಯ್ಯ ಏಕ್ ಲವ್ ಯಾ ಸಿನಿಮಾ ಮೂಲಕ ನಾಯಕಿಯಾಗಿ ಬಣ್ಣದ ಲೋಕಕ್ಕೆ ಕಾಲಿಡುತ್ತಿದ್ದಾರೆ.

ಮೂಲತಃ ಕೊಡಗಿನವರಾದ ರೀಷ್ಮಾ ಇನ್ನು ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದಾರೆ. ಈಗಾಗಲೆ ಫ್ಯಾಷನ್ ಲೋಕದಲ್ಲಿ ಸಕ್ರಿಯರಾಗಿರುವ ರೀಷ್ಮಾ ಓದು ಮತ್ತು ನಟನೆಯನ್ನು ಬ್ಯಾಲೆನ್ಸ್ ಮಾಡಲು ಯೋಜನೆ ಹಾಕಿಕೊಂಡಿದ್ದಾರೆ ಎನ್ನಲಾಗಿದೆ. ಏಕ್ ಲವ್ ಯಾಗಾಗಿ ಸಾಕಷ್ಟು ತರಬೇತಿಯನ್ನು ಪಡೆಯುತ್ತಿರುವ ರೀಷ್ಮಾ ಇದೇ ತಿಂಗಳ 22ರಿಂದ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ. ದಿ ವಿಲನ್ ನಂತರ ಪ್ರೇಮ್ ನಿರ್ದೇಶನ ಮಾಡುತ್ತಿರುವ ಸಿನಿಮಾ ಇದಾಗಿದ್ದು, ರಕ್ಷಿತಾ ಪ್ರೇಮ ನಿರ್ಮಾಣ ಮಾಡುತ್ತಿದ್ದಾರೆ. ಈ ಚಿತ್ರದ ಮೂಲಕ ತಮ್ಮ ಸಹೋದರ ಅಭಿಷೇಕ್ ನನ್ನು ಸ್ಯಾಂಡಲ್ ವುಡ್ ಗೆ ರಕ್ಷಿತಾ ಲಾಂಚ್ ಕೂಡಾ ಮಾಡಲಿದ್ದಾರೆ.

ಇನ್ನಷ್ಟು ಓದಿರಿ

Scroll to Top