ಬಹುದ್ದೂರ್ ಚೇತನ್ ಚಿತ್ರದಲ್ಲಿ ಬಜಾರ್ ಹುಡುಗ!

Picture of Cinibuzz

Cinibuzz

Bureau Report

ಸಿಂಪಲ್ ಸುನಿ ನಿರ್ದೇಶನದ ‘ಬಜಾರ್’ ಮೂಲಕ ಚಂದನವನಕ್ಕೆ ಕಾಲಿಟ್ಟ ಹುಡುಗ ಧನ್ವೀರ್. ಮೊದಲ ಸಿನಿಮಾದಲ್ಲಿಯೇ ಕಮಾಲು ಮಾಡಿ ಸದ್ಯ ಎರಡನೇ ಚಿತ್ರದ ಸಿದ್ದತೆಯಲ್ಲಿದ್ದಾರೆ.  ಹೌದು, ಮೊದಲ ಚಿತ್ರದ ಯಶಸ್ಸಿನ ನಂತರ ಧನ್ವೀರ್ ಹೊಸ ಚಿತ್ರದ ಸಿದ್ದತೆಯಲ್ಲಿ ತೊಡಗಿಕೊಂಡಿದ್ದು, ಈ ಚಿತ್ರವನ್ನು ‘ಭರ್ಜರಿ’ ಚೇತನ್ ಕುಮಾರ್ ನಿರ್ದೇಶನ ಮಾಡಲಿದ್ದಾರೆ. ಈಗಾಗಲೇ ಜಿಮ್ ನಲ್ಲಿ ಬೆವರಿಳಿಸುತ್ತಿರುವ ಧನ್ವೀರ್ ಚಿತ್ರಕ್ಕೆ ಸಾಕಷ್ಟು ತಯಾರಿಯನ್ನು ನಡೆಸುತ್ತಿದ್ದಾರೆ.

ಮೊದಲ ಚಿತ್ರದಲ್ಲಿ ಕ್ರೈಂ ಕಥಾಹಂದರವನ್ನು ಚ್ಯೂಸ್ ಮಾಡಿದ್ದ ಧನ್ವೀರ್ ಎರಡನೇ ಚಿತ್ರದಲ್ಲಿ ಲವ್ ಸ್ಟೋರಿಯ ಬೆನ್ನುಬಿದ್ದಿದ್ದಾರೆ. ಹಾಗೆಯೇ ಧನ್ವೀರ್ ರವರು ತೆಲುಗಿನ ಅಲ್ಲು ಅರ್ಜುನ್ ಗೆಟಪ್ ನಂತೆಯೇ ಸ್ಟೈಲಿಶ್ ಆಗುತ್ತಿದ್ದಾರೆ. ಈಗಾಗಲೇ ದೇಹ ಹುರಿಗಟ್ಟಿಸುವುದಕ್ಕೆ ಹಗಲಿರುಳು ಜಿಮ್​ ನಲ್ಲಿ ಶ್ರಮಿಸುತ್ತಿದ್ದಾರೆ. ಈ ಚಿತ್ರವನ್ನು ‘ಭರಾಟೆ’ ನಿರ್ಮಾಪಕ ಸುಪ್ರೀತ್ ನಿರ್ಮಿಸುತ್ತಿದ್ದಾರೆ..

ಇನ್ನಷ್ಟು ಓದಿರಿ

Scroll to Top