ನಿಕ್ ಜೋನಸ್ ನ ಸುಂದರಿ ಪಿಂಕಿ ಇತ್ತೀಚಿಗೆ ಧರಿಸುವ ಚಿತ್ರ ವಿಚಿತ್ರವಾದ ಬಟ್ಟೆಗಳಿಂದ ಟ್ರೋಲಿಗರಿಗೂ ದಿಗಿಲು ಹುಟ್ಟಿಸುತ್ತಿದ್ದಾರೆ. ಅಲ್ಲದೇ ಇವಳ ಬಾಳು ಇಷ್ಟೇ ಅಂತ ಕೈ ಚೆಲ್ಲಿ ಕೂರುವಂತಹ ಮನಸ್ಥಿತಿಗೆ ನೆಟ್ಟಿಗರನ್ನು ಪ್ರಿಯಾಂಕ ಚೋಪ್ರಾ ತಲುಪಿಸುತ್ತಿರುವುದು ದುರಂತ. ಯಾಕಂದ್ರೆ ಬಟ್ಟೆ ವಿಚಾರವಾಗಿ ಸಾಕಷ್ಟು ಬಾರಿ ಪಿಂಕಿ ಟ್ರೋಲಾದರೂ ಸಹ ಅಷ್ಟೇನೂ ಸುಧಾರಿಸದೇ ದಿನೇ ದಿನೇ ತನ್ನ ಛಾಳಿಯನ್ನು ಮುಂದುವರೆಸುತ್ತಲೇ ಇರುವ ಪ್ರಿಯಾಂಕ ಚೋಪ್ರಾ ಸದ್ಯ ಖಾಕಿ ಚಡ್ಡಿಯಲ್ಲಿ ಫುಲ್ ಮಿಂಚುತ್ತಿದ್ದಾರೆ.
https://twitter.com/ramdeoangh/status/1140857476079730688
ಹೌದು ಪ್ರಿಯಾಂಕ ಖಾಕಿ ಚಡ್ಡಿ ಧರಿಸಿ ತನ್ನ ಗಂಡ ನಿಕ್ ಜೋನಾಸ್ ಜತೆಗೆ ಹೆಜ್ಜೆ ಹಾಕುತ್ತಿರುವ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಪೋಟೋಗಳಿಗೆ ಬಹಳಷ್ಟು ಟೀಕೆಗಳು ವ್ಯಕ್ತವಾಗಿದೆ. “ಪ್ರಿಯಾಂಕಾ ಆರ್‌ಎಸ್‍ಎಸ್‌ಗೆ ಸೇರಿದರೇ? ಅಥವಾ ಆರ್‌ಎಸ್‌ಎಸ್ ಪ್ರಚಾರಕಿಯಾಗಿ ವ್ಯವಹರಿಸುತ್ತಿದ್ದಾರಾ?” ಎಂಬ ಕಾಮೆಂಟ್‍ಗಳನ್ನು ಬಹಳಷ್ಟು ಮಂದಿ ನೆಟ್ಟಿಗರು ಮಾಡುತ್ತಿದ್ದಾರೆ. ಇದಿಷ್ಟೇ ಅಲ್ಲದೆ ಎರಡು ವರ್ಷಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಜರ್ಮನಿಯಲ್ಲಿ ಪ್ರಿಯಾಂಕಾ ಭೇಟಿಯಾಗಿದ್ದರು. ಆಗಲೇ ಆರ್‌ಎಸ್‌ಎಸ್‍ನಲ್ಲಿ ಸೇರಲು ಚರ್ಚಿಸಿದ್ದಾರೇನೋ ಎಂದು ತಮಾಷೆಯಾಗಿ ಕಾಮೆಂಟ್ ಮಾಡುತ್ತಿದ್ದಾರೆ.











































