ಮಾಜಿ ಮಿಸ್ ಯೂನಿವರ್ಸ್ ಜತೆ ಯುವಕರ ಅಸಭ್ಯ ವರ್ತನೆ!

Picture of Cinibuzz

Cinibuzz

Bureau Report

ಕೋಲ್ಕತ್ತಾದ ಜೆಡಬ್ಲ್ಯೂ ಮಾರಿಯಟ್ ನಲ್ಲಿ ಉದ್ಯೋಗ ಮುಗಿಸಿ ಹಿಂತಿರುಗುತ್ತಿದ್ದ ಮಾಜಿ ಮಿಸ್ ಇಂಡಿಯಾ ಉಷೋಷಿ ಸೇನ್ ಗುಪ್ತಾ ಅವರು ಹೋಗಿದ್ದ ಊಬರ್ ಕಾರನ್ನು ಅಡ್ಡಗಡ್ಡಿ ಯುವಕರು ಅಸಭ್ಯ ವರ್ತನೆ ತೋರಿದ್ದಾರೆ. ಹೌದು ರಾತ್ರಿ ಸುಮಾರು 11.42ರ ಸಮಯದಲ್ಲಿ ಮಾರ್ಗ ಮಧ್ಯೆ ಬೈಕ್ ನಲ್ಲಿ ಬಂದ ಕೆಲವು ಯುವಕರು ಊಬರ್ ಗೆ ಡಿಕ್ಕಿ ಹೊಡೆದು, ಕಲ್ಲು ತೂರುವುದರ ಜತೆಗೆ ಊಬರ್ ಚಾಲಕನನ್ನು ಥಳಿಸಿದ್ದಾರೆ.

ಉಷೋಷಿ ರಸ್ತೆಯಿಂದ ಇಳಿದು ಪೊಲೀಸ್ ಠಾಣೆಗೆ ದೌಡಾಯಿಸಿ, ದೂರು ದಾಖಲಿಸಲು ಮುಂದಾಗಿದ್ದಾರೆ. ಆದರೆ ಪೊಲೀಸರು ಇದು ನಮ್ಮ ವ್ಯಾಪ್ತಿಗೆ ಬರುವುದಿಲ್ಲವೆಂದು ಹೇಳಿದ್ದಾರೆ. ಆದರೆ ಆಕೆಯ ಕಣ್ಣೀರಿಗೆ ಬೆಲೆಕೊಟ್ಟು ಪೊಲೀಸರು ಕೃತ್ಯ ನಡೆದ ಸ್ಥಳಕ್ಕೆ ಆಗಮಿಸಿದ್ದಾರೆ. ಆದರೆ ಪೊಲೀಸರು ಬರುತ್ತಿದ್ದಂತೆ ಯುವಕರು ಅಲ್ಲಿಂದ ಪರಾರಿಯಾಗಿದ್ದಾರೆ. ಈ ಕುರಿತು ಉಷೋಷಿ ಸೋಶಿಯಲ್ ಮೀಡಿಯಾದಲ್ಲಿ ಅಳಲು ತೋಡಿಕೊಂಡಿದ್ದು, ಪೊಲೀಸರು ಅಸಹಕಾರಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ. ಇದಾದ ಬಳಿಕ ಪೊಲೀಸರು ಈ ಘಟನೆಗೆ ಸಂಬಂಧಿಸಿದಂತೆ ಏಳು ಮಂದಿಯನ್ನು ಬುಧವಾರ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ಇನ್ನಷ್ಟು ಓದಿರಿ

Scroll to Top