ನೀನಾಸಂ ಸತೀಶ್ ಅಭಿನಯದ ಬ್ರಹ್ಮಚಾರಿ ಚಿತ್ರದ ಟೀಸರ್ ರಿಲೀಸ್ ಆಗಿದೆ. ಈಗಷ್ಟೇ ಮದುವೆಯಾಗಿರುವ ಮದುಮಗ ಲೈಂಗಿಕ ತಜ್ಞರ ಬಳಿ ಬಂದು ಫಸ್ಟ್ ನೈಟ್ ವಿಫಲತೆಯ ಕುರಿತು ಸ್ನೇಹಿತರ ಸಹಾಯದಿಂದ ಹೇಳಿಕೊಳ್ಳುವ ಸೀನು ಆ ಟೀಸರ್ ನಲ್ಲಿ ಕಾಣಬಹುದಾಗಿದೆ. ಫಸ್ಟ್ ನೈಟ್ ವಿಫಲತೆಯನ್ನು ಕ್ರಿಕೆಟ್ ನಲ್ಲಿ ರನ್ ಔಟ್ ಗೆ ಲಿಂಕ್ ಮಾಡಿ ತೋರಿಸಲಾಗಿದೆ. ನೀನಾಸಂ ಸತೀಶ್ ಅಮಾಯಕನಂತೆ ಕಂಡು ಬಂದರೆ ಶಿವರಾಜ್ ಕೆ.ಆರ್. ಪೇಟೆ, ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ ಖ್ಯಾತಿಯ ದತ್ತ ಉರುಫ್ ಅಶೋಕ್ ಶರ್ಮಾ ಸತೀಶನ ಸ್ನೇಹಿತರಾಗಿ ಕಾಣಿಸಿಕೊಂಡಿದ್ದಾರೆ. ಇನ್ನು ಲೈಂಗಿಕ ತಜ್ಞರಾಗಿ ದತ್ತಣ್ಣ, ಬ್ರಹ್ಮಚಾರಿಯ ಹೆಂಡತಿಯಾಗಿ ಅಧಿತಿ ಪ್ರಭುದೇವ್ ಪಾತ್ರಗಳು ಟೀಸರ್ ನಲ್ಲಿ ಅನಾವರಣಗೊಂಡಿದೆ.
ನೋಡ ನೋಡುತ್ತಲೇ ಪಕ್ಕಾ ಫ್ಯಾಮಿಲಿ ಎಂಟರ್ ಟೆನ್ ಮೆಂಟ್ ಚಿತ್ರವಾಗಿ ಕಾಣಿಸುವ ಬ್ರಹ್ಮಚಾರಿ ನೋಡುಗರಿಗೆ ಕಚಗುಳಿ ಇಡುವುದಂತೂ ಗ್ಯಾರೆಂಟಿ. ಈ ಮೊದಲು ಟೀಸರ್ ಬಿಡುಗಡೆಗೂ ಮುನ್ನ ಟೀಸರ್ ಪ್ರೋಮೋ ರಿಲೀಸ್ ಮಾಡಲಾಗಿತ್ತು. ಇಂದು ಒಂದು ನಿಮಿಷ ಮೂವತ್ತೆರಡು ಸೆಕೆಂಡಿನ ಟೀಸರ್ ಅಧಿಕೃತವಾಗಿ ಬಿಡುಗಡೆಯಾಗಿದೆ. ಬ್ರಹ್ಮಚಾರಿ ಸಿನಿಮಾವನ್ನು ಚಂದ್ರ ಮೋಹನ್ ನಿರ್ದೇಶನ ಮಾಡಿದ್ದು, ಉದಯ್ ಕೆ ಮೆಹ್ತಾ ಬಂಡವಾಳ ಹೂಡಿದ್ದಾರೆ. ಧರ್ಮ ವಿಶ್ ಸಂಗೀತ ಚಿತ್ರಕ್ಕಿದೆ.
No Comment! Be the first one.