ಕರಾವಳಿ ಕ್ರೈಮ್ ನ ರಿಯಲ್ ಸ್ಟೋರಿ ಹಫ್ತಾ!

Picture of Cinibuzz

Cinibuzz

Bureau Report

ಮೈತ್ರಿ ಪ್ರೊಡಕ್ಷನ್ ಮೂಲಕ ಮೈತ್ರಿ ಮಂಜುನಾಥ್ ನಿರ್ಮಾಣ ಮಾಡಿರುವ ಸಿನಿಮಾ ಹಫ್ತಾ. ಪ್ರಕಾಶ್ ಹೆಬ್ಬಾಳ್ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಹಫ್ತಾ ಚಿತ್ರದ ಮೂಲಕ ಕರಾವಳಿ ಕ್ರೈಮ್ ಕಮ್ ಲವ್ ಸ್ಟೋರಿಯ ಕಥೆಯನ್ನು ಹೇಳಿದ್ದಾರೆ. ಕ್ರೈಮ್ ಕಥಾನಕವಾಗಿದ್ದರೂ ಕುಟುಂಬ ಸಮೇತ ನೋಡಬಹುದಾದ ಸಿನಿಮಾ ಇದಾಗಿರಲಿದೆಯಂತೆ.  ಚಿತ್ರದ ಟೈಟಲ್ ಕೇಳಿದಾಕ್ಷಣ ಇದೊಂದು ವಸೂಲಿ ಕಥೆ ಎಂದೆನಿಸಿದರೂ ಸಹ ಭಿನ್ನ ಕಥಾಹಂದರವನ್ನು ಹೊಂದಿರುವುದು ಹಫ್ತಾ ವಿಶೇಷತೆ. ಹಫ್ತಾ ಕಥೆಯಲ್ಲಿ ಬರುವ ಎಲ್ಲ ಪಾತ್ರಗಳೂ ವಿಲನ್ ಶೇಡಿನದ್ದಾಗಿದ್ದರೂ ಸಹ ಅಪ್ಪಟ ಸೆಂಟಿಮೆಂಟಿನ ಕಥೆಯಿದು. ಈಗಾಗಲೇ ಹಫ್ತಾ ಟ್ರೇಲರ್ ರಿಲೀಸ್ ಆಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಈಗಾಗಲೇ ಸದ್ದು ಮಾಡುತ್ತಿದೆ.

ಚಿಕ್ಕ ಪುಟ್ಟ ಪಾತ್ರಗಳನ್ನೇ ಮಾಡುತ್ತ ಚಂದನವನದಲ್ಲಿ ಗುರುತಿಸಿಕೊಂಡಿದ್ದ ವರ್ಧನ್ ತೀರ್ಥಹಳ್ಳಿ ಹಫ್ತಾ ಸಿನಿಮಾದ ಮೂಲಕ ನಾಯಕ ನಟನಾಗಿ ಬಡ್ತಿ ಪಡೆದಿದ್ದಾರೆ. ಮತ್ತೊಬ್ಬ ನಾಯಕನಾಗಿ ರಾಘವ್ ನಾಗ್ ಅಭಿನಯಿಸಿದ್ದಾರೆ. ಇವರಿಗೆ ಬಿಂಬಶ್ರೀ, ಸೌಮ್ಯ ತಿತಿರಾ ನಾಯಕಿಯರಾಗಿ ಜತೆಯಾಗಿದ್ದಾರೆ. ಹಫ್ತಾ ಮಾಸ್ ಚಿತ್ರವಾಗಿದ್ದು, ನೈಜವಾಗಿ ಮೂಡಿಬಂದಿದೆ. ಕ್ರೈಮ್ ಲವ್ ಟ್ರ್ಯಾಕ್ ನಲ್ಲಿಯೇ ಸಾಗುವ ಹಫ್ತಾ ಚಿತ್ರದ ಕ್ಲೈಮ್ಯಾಕ್ಸ್ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವುದಂತೆ. ನಾಳೆ ಹಫ್ತಾ ರಿಲೀಸ್ ಆಗಲಿದ್ದು, ಈ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಮತ್ತೊಬ್ಬ ಮಾಸ್ ಹೀರೋ ದಕ್ಕುವುದಂತೂ ಪಕ್ಕಾ ಎಂಬುದು ನಿರ್ದೇಶಕರ ಅಂಬೋಣ.

ಇನ್ನಷ್ಟು ಓದಿರಿ

Scroll to Top