ತಮಿಳಿನ ತಿರುಟ್ಟುಪಯಲೇ ಈಗ ಕನ್ನಡದ 100

Picture of Cinibuzz

Cinibuzz

Bureau Report

ಬಟರ್ ಫ್ಲೈ ಚಿತ್ರದ ನಂತರ  ನಟ, ನಿರ್ದೇಶಕ ರಮೇಶ್ ಅರವಿಂದ್  ಈಗ ಪೋಲೀಸ್ ಕ್ರೈಂ ಸಬ್ಜೆಕ್ಟ್  ಒಂದನ್ನು  ಕೈಗೆತ್ತಿಕೊಂಡಿದ್ದಾರೆ.  ಆ ಚಿತ್ರದ ಹೆಸರು 100.  ರಮೇಶ್ ಅರವಿಂದ್  ಅವರ ನಿರ್ದೇಶನದಲ್ಲಿ  ಮೂಡಿಬರುತ್ತಿರುವ  ಹಾಗೂ ಅವರೇ ನಾಯಕನಾಗಿ  ಅಭಿನಯಿಸುತ್ತಿರುವ  ಈ  ಚಿತ್ರದ  ಮುಹೂರ್ತ ಸಮಾರಂಭ  ಬುಧವಾರ  ಬನಶಂಕರಿಯ  ಧರ್ಮಗಿರಿ ಮಂಜುನಾಥ  ದೇವಸ್ಥಾನದಲ್ಲಿ   ಸರಳವಾಗಿ ನೆರವೇರಿತು.  ಚಿತ್ರದ ಶೀರ್ಷಿಕೆ  ೧೦೦ ಎಂದಕೂಡಲೇ  ಇದು  ಪೋಲೀಸ್ ಇಲಾಖೆಗೆ  ಸಂಬಂಧಿಸಿದ  ಕಥೆ  ಇರಬಹುದು ಅಂತ ಯಾರಾದರೂ ಊಹಿಸಬಹುದು.  ಹೌದು,  ಈ ಚಿತ್ರದಲ್ಲಿ  ಸೈಬರ್ ಅಪರಾಧಗಳ ಕುರಿತಂತೆ ತನಿಖೆ ಮಾಡುವ  ಕಥಾಹಂದರವಿದೆ.

ಈ ಚಿತ್ರದ ಮೂಲಕ  ಮತ್ತೊಮ್ಮೆ  ಖಾಕಿ ತೊಟ್ಟಿರುವ  ನಟ ರಮೇಶ್ ಅರವಿಂದ್  ಇಲ್ಲಿ  ಒಬ್ಬ  ಖಡಕ್ ಪೊಲೀಸ್ ಅಧಿಕಾರಿಯಾಗಿ  ಕಾಣಿಸಿಕೊಳ್ಳಲಿದ್ದಾರೆ. ಚಿತ್ರದಲ್ಲಿ ಅವರ ಹೆಸರು  ವಿಷ್ಣು. ಪಾತ್ರದ ಹೆಸರು ಕೂಡ ವಿಭಿನ್ನವಾಗಿದೆ. ಇತ್ತೀಚಿನ  ದಿನಗಳಲ್ಲಿ ಸಾಮಾಜಿಕ ಜಲತಾಣಗಳ ಬಳಕೆಯಿಂದಾಗಿ  ಸಾಕಷ್ಟು ಅನಾಹುತಗಳು  ನಡೆಯುತ್ತಿದ್ದು,  ಅನೇಕ ಕುಟುಂಬಗಳ ನೆಮ್ಮದಿಗೆ  ಇದು  ಭಂಗ ತಂದಿದೆ.  ಹೆಣ್ಣು ಮಕ್ಕಳನ್ನು  ಪಟಾಯಿಸಲು  ಜಲತಾಣದ ಮೂಲಕ ಪೋಲಿ ಹುಡುಗರು ಅವರನ್ನು  ಫಾಲೋ ಮಾಡುವುದು,  ಅವರ ಜೊತೆ  ಸ್ನೇಹ ಬೆಳೆಸಿಕೊಂಡು ನಂತರ  ಸಂಬಂಧ ಬೆಳೆಸುವುದು  ನಡೆಯುತ್ತದೆ.  ಇದರಿಂದ ಉದ್ಭವಿಸುವಂಥ   ಸಮಸ್ಯೆಗಳು,  ಹಾಗೂ  ಇದಕ್ಕೆ  ಪರಿಹಾರ ಕಂಡು ಹಿಡಿಯುವುದು ಹೇಗೆ ಎಂದು  100 ಚಿತ್ರದ  ಮೂಲಕ ಹೇಳುವ ಪ್ರಯತ್ನ ಮಾಡಲಾಗಿದೆ  ಎಂದು  ಚಿತ್ರದ ನಿರ್ದೇಶಕರೂ ಆದ  ನಟ ರಮೇಶ್ ಅರವಿಂದ್  ಅವರು  ಮುಹೂರ್ತದ ನಂತರ ನಡೆದ ಪತ್ರಿಕಾಗೋಷ್ಟಿಯಲ್ಲಿ   ಹೇಳಿದ್ದಾರೆ.

ಸುಸಿಲ್ ಶ್ರೀಧರ್   ಅವರ ಕಥೆಯ  ಎಳೆಯನ್ನು  ಅವರ ಅನುಮತಿ ಪಡೆದುಕೊಂಡು,  ನಮ್ಮ ಕಲ್ಪನೆಗೆ ತಕ್ಕಂತೆ ಬದಲಿಸಲಾಗಿದೆ.  ಸೈಬರ್ ಕ್ರೈಮ್ ವಿಷಯವನ್ನು ಹಾಗೇ ಉಳಿಸಿಕೊಂಡಿದ್ದು,  ರಚಿತಾ ರಾಮ್ ಪಾತ್ರವನ್ನು ಹೊಸದಾಗಿ ಸೃಷ್ಟಿಸಲಾಗಿದೆ.  ತಮಿಳಿನಲ್ಲಿ  ಈಗಾಗಲೇ  ಈ  ಚಿತ್ರ ಹೊರಬಂದಿದ್ದು, ಕನ್ನಡ ಹಾಗೂ ಹಿಂದಿಯಲ್ಲಿ ವಿಭಿನ್ನ ರೂಪದಲ್ಲಿ ನಿರ್ಮಾಣವಾಗಲಿದೆ ಎಂಸು ಹೇಳಿದರು.

ಈ ಹಿಂದೆ ತೇಜಸ್ವಿನಿ ಎಂಟರ್ ಪ್ರೈಸಸ್ ಮೂಲಕ  ಪಡ್ಡೆಹುಲಿ  ಸೇರಿದಂತೆ  3 ಚಿತ್ರಗಳನ್ನು ನಿರ್ಮಾಣ ಮಾಡಿರುವ  ನಿರ್ಮಾಪಕ ರಮೇಶ್ ರೆಡ್ಡಿ  ಅವರ  ನೂತನ  ಸಂಸ್ಥೆ  ಸೂರಜ್ ಪ್ರೊಡಕ್ಷನ್ಸ್  ಅಡಿಯಲ್ಲಿ  ಈ  ಚಿತ್ರ ನಿರ್ಮಾಣವಾಗಲಿದೆ.  ಸುವರ್ಣ ಸುಂದರಿ  ಚಿತ್ರದಲ್ಲಿ  ನಾಯಕಿಯಾಗಿ  ನಟಿಸಿದ್ದ  ಪೂರ್ಣ  ಈ  ಚಿತ್ರದಲ್ಲಿ  ರಮೇಶ್ ಅರವಿಂದ್  ಅವರ ಜೊತೆ ಪ್ರಮುಖ ಪಾತ್ರದಲ್ಲಿ  ನಟಿಸಲಿದ್ದಾರೆ.  ಈ ಚಿತ್ರದಲ್ಲಿ  ಐ ಲವ್‌ಯು ಬೆಡಗಿ ರಚಿತಾರಾಮ್  ಅವರು ಸದಾ ಕೈಯಲ್ಲಿ  ಮೊಬೈಲ್ ಹಿಡಿದಿರುವ  ಯುವತಿಯ  ಪಾತ್ರದಲ್ಲಿ  ಕಾಣಿಸಿಕೊಳ್ಳಲಿದ್ದಾರೆ.  ರಮೇಶ್ ಅರವಿಂದ್ ಅಭಿನಯದ  ನೂರನೇ  ಚಿತ್ರ ಪುಷ್ಪಕ ವಿಮಾನದಲ್ಲಿ ಅವರ  ಮಗಳ ಪಾತ್ರದಲ್ಲಿ ರಚಿತಾ ಕಾಣಿಸಿಕೊಂಡಿದ್ದರಾದರೂ,   ಒಟ್ಟಿಗೆ  ಸ್ಕ್ರೀನ್ ಶೇರ್  ಮಾಡುವ ಅವಕಾಶ ಸಿಕ್ಕಿರಲಿಲ್ಲ 100  ಸಿನಿಮಾದಲ್ಲಿ  ಬೇರೆ ಥರದ ಪಾತ್ರ  ಮಾಡಿದ್ದಾರೆ.  ಸತ್ಯ ಹೆಗಡೆ ಅವರ ಕ್ಯಾಮೆರಾ ವರ್ಕ್ ಹಾಗೂ ರವಿ ಬಸ್ರೂರ್ ಅವರ ಸಂಗೀತ ಸಂಯೋಜನೆ  ಈ ಚಿತ್ರಕ್ಕಿದೆ. ಚಿತ್ರದ ಪ್ರಮುಖ  ತಾರಾಗಣದಲ್ಲಿ ರಮೇಶ್ ಅರವಿಂದ್, ಪೂರ್ಣ, ರಚಿತಾ ರಾಮ, ವಿಶ್ವಾಸ್, ರಾಜೇಶ್, ಸುಕನ್ಯಾ, ಅಮಿತಾ ರಂಗನಾಥ್, ಲಕ್ಷ್ಮೀ ಆನಂದ್ ಮೊದಲಾದವರಿದ್ದಾರೆ.

ಇನ್ನಷ್ಟು ಓದಿರಿ

Scroll to Top