ನಾಳೆ ರಾಂಧವನಿಂದ ಶಾಕಿಂಗ್ ವಿಡಿಯೋ!

Picture of Cinibuzz

Cinibuzz

Bureau Report

ಈಗಾಗಲೇ ಟ್ರೇಲರ್, ಟೀಸರ್, ಟೈಟಲ್ ಟ್ರ್ಯಾಕ್ ಮೂಲಕವೇ ಸಾಕಷ್ಟು ಸದ್ದು ಮಾಡುತ್ತಿರುವ ಸಿನಿಮಾ ರಾಂಧವ. ಬಿಗ್ ಬಾಸ್ ಖ್ಯಾತಿಯ ಭುವನ್ ಪೊನ್ನಣ್ಣ ಈ ಚಿತ್ರದಲ್ಲಿ ಡಬಲ್ ಶೇಡ್ ನಲ್ಲಿ ನಟಿಸಿದ್ದಾರೆ. ಒಂದು ಶೇಡ್ ನಲ್ಲಿ ಮಹಾರಾಜನಾಗಿ ನಟಿಸಿರುವ ಭುವನ್ ಮತ್ತೊಂದು ಶೇಡ್ ನಲ್ಲಿ ಸಾಮಾನ್ಯನಂತೆ ನಟಿಸಿದ್ದಾನೆ.

ಚಿತ್ರದ ಟ್ರೇಲರ್ ನಲ್ಲಿ ಮೇಕಿಂಗ್ ಕಲರ್ ಪುಲ್ ಆಗಿ ಮೂಡಿಬಂದಿದೆ. ಸದ್ಯದ ಸುದ್ದಿ ಏನಂದ್ರೆ ನಾಳೆ ಸಂಜೆ ಆರು ಗಂಟೆಗೆ ರಾಂಧವ ಚಿತ್ರತಂಡ ವಿಶೇಷವಾದ ವಿಡಿಯೋವೊಂದನ್ನು ರಿಲೀಸ್ ಮಾಡಲಿದ್ದು ಆ ವಿಡಿಯೋದಲ್ಲಿ ಕರ್ನಾಟಕವನ್ನು, ಕನ್ನಡಿಗರನ್ನ ಬರಡು ಭೂಮಿಗೆ ಹೋಲಿಸಿದ ತಮಿಳು ರಾಜನಿಗೆ ರಾಂಧವ ಏನ್ ಮಾಡ್ದ ಅನ್ನೋ ಸೀಕ್ರೆಟ್ ಆ ವಿಡಿಯೋದಲ್ಲಿದೆ ಅನ್ನೋದ್ ಮಾತ್ರ ಸದ್ಯದ ಕ್ಲೂ. ಅದು ಏನು ಅನ್ನೋದನ್ನ ತಿಳಿದುಕೊಳ್ಳುವುದಕ್ಕೆ ನಾಳೆವರೆಗೂ ಕಾಯಲೇಬೇಕು….

ಇನ್ನಷ್ಟು ಓದಿರಿ

Scroll to Top