19 AGE IS  ನಾನ್‍ಸೆನ್ಸ್?” ಚಿತ್ರಕ್ಕೆ ಮುಹೂರ್ತ

Picture of Cinibuzz

Cinibuzz

Bureau Report

ಮನುಷ್ಯನ ವಯಸ್ಸೇ ಹಾಗೆ. ವಯಸ್ಸು ಏರುತ್ತಿದ್ದಂತೆ ಪ್ರತಿಯೊಬ್ಬ ವ್ಯಕ್ತಿಯೂ ನಿರ್ದಿಷ್ಟ ಹಂತವನ್ನು ತಲುಪುತ್ತಾನೆ. ಅದರಲ್ಲೂ ಮನುಷ್ಯನ 19ರ ವಯಸ್ಸಿನ ಆಸು ಪಾಸಂತೂ ಮರೆಯಲಾರದ ಅನುಭವವನ್ನು ಹೊಂದಿರುವಂತದ್ದು. ಹುಚ್ಚು ಮನಸ್ಸಿನಲ್ಲಿ ಕುಣಿಯುವ ಆ ವಯಸ್ಸಿನಲ್ಲಿ ಏನೆಲ್ಲವನ್ನು ಮಾಡಬಹುದು ಎನ್ನುವುದನ್ನು ಕೇಳುವುದೇ ಒಂದು ಮಜವಾಗಿರುತ್ತದೆ. ಈಗ ಅದೇ ಹೆಸರಿನ 19 AGE IS  ನಾನ್‍ಸೆನ್ಸ್?” ಎಂಬ ಚಿತ್ರ ಇತ್ತೀಚಿಗೆ ಸೆಟ್ಟೇರಿದೆ.

ಈ ಸಿನಿಮಾವನ್ನು ರಾಜೇಶ್ವರಿ ಫಿಲಂ ಲಾಂಛನದಲ್ಲಿ ಎಸ್. ಲೊಕೇಶ್ ನಿರ್ಮಾಣ ಮಾಡಲಿದ್ದಾರೆ. ಇನ್ನು ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆಯ ಜತೆಗೆ ನಿರ್ದೇಶನದ ಜವಾಬ್ದಾರಿಯನ್ನು ಗಿಣಿ ವಹಿಸಿದ್ಧಾರೆ. ಉಳಿದಂತೆ ವಿಕ್ಟರಿ ಛಾಯಾಗ್ರಹಣ, ರವಿಚಂದ್ರನ್ ಸಂಕಲನ, ಶಿವ ಸಾಹಸ ಸಂಯೋಜನೆ, ವಿ. ನಾಗೇಂದ್ರ ಪ್ರಸಾದ್ ಗೀತ ಸಾಹಿತ್ಯ ಈ ಚಿತ್ರಕ್ಕಿದೆ. ತಾರಾಂಗಣದಲ್ಲಿ ಮನಿಷ್, ಮಧುಮಿತ, ಬಾಲು, ಸೌಭಾಗ್ಯ, ಶ್ರೀಲಕ್ಷ್ಮೀ, ಕಾವ್ಯಪ್ರಕಾಶ್, ರಂಗಸ್ವಾಮಿ ಇತತರರಿದ್ದಾರೆ.

ಇನ್ನಷ್ಟು ಓದಿರಿ

Scroll to Top