ಈ ವಾರ ತೆರೆಗೆ `ರುಸ್ತುಂ’

Picture of Cinibuzz

Cinibuzz

Bureau Report

ಜಯಣ್ಣ ಫಿಲಂಸ್ ಲಾಂಛನದಲ್ಲಿ ಜಯಣ್ಣ – ಬೋಗೇಂದ್ರ ಅವರು ನಿರ್ಮಿಸಿರುವ, ಸೆಂಚುರಿ ಸ್ಟಾರ್ ಶಿವರಾಜಕುಮಾರ್ ಅಭಿನಯದ `ರುಸ್ತುಂ` ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಖ್ಯಾತ ಸಾಹಸ ನಿರ್ದೇಶಕ ಡಾ||ರವಿವರ್ಮ ಚಿತ್ರಕಥೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ ಅನೂಪ್ ಸೀಳಿನ್ ಸಂಗೀತ ನೀಡಿದ್ದಾರೆ. ಸಾಹಸ ಸಂಯೋಜನೆಯನ್ನು ನಿರ್ದೇಶಕ ರವಿ ವರ್ಮ ಅವರೇ ಮಾಡಿರುವುದು ವಿಶೇಷವಾಗಿದೆ. ಮಹೇನ್ ಸಿಂಹ ಛಾಯಾಗ್ರಹಣ, ದೀಪು.ಎಸ್.ಕುಮಾರ್ ಸಂಕಲನ, ನಾಗು ಆರ್.ಕೆ ಸಂಕಲನ ಹಾಗೂ ರಾಜು ಸುಂದರಂ, ಇಮ್ರಾನ್ ಸರ್ದಾರಿಯಾ ನೃತ್ಯ ನಿರ್ದೇಶನವಿದೆ.ಈ ಚಿತ್ರದ ಹಾಡುಗಳನ್ನು ಡಾ||ವಿ.ನಾಗೇಂದ್ರಪ್ರಸಾದ್ ಹಾಗೂ ಎ.ಪಿ.ಅರ್ಜುನ್ ರಚಿಸಿದ್ದು, ರಘು ಸಮರ್ಥ್ ಸಂಭಾಷಣೆ ಬರೆದಿದ್ದಾರೆ.

ಇನ್ನು ತಾರಾಂಗಣದಲ್ಲಿ  ಡಾ||ಶಿವರಾಜಕುಮಾರ್, ವಿವೇಕ್ ಒಬೆರಾಯ್, ಶ್ರದ್ಧಾ ಶ್ರೀನಾಥ್, ಮಯೂರಿ, ರಚಿತಾರಾಂ, ಹರೀಶ್ ಉತ್ತಮನ್, ಮಹೇಂದ್ರನ್, ಶತ್ರು, ಸಿದ್ಲಿಂಗು ಶ್ರೀಧರ್, ಧನರಾಜ್, ಪದ್ಮಾಜಾರಾವ್, ಮಂಜುನಾಥ್ ಹೆಗಡೆ, ಗಣೇಶ್ ಯಾದವ್, ನೈಲಾ(ಬಾಲನಟಿ), ಅರ್ಜುನ್ ಗೌಡ, ಶಿವರಾಜ ಕೆ.ಆರ್.ಪೇಟೆ, ಮಜಾ ಟಾಕೀಸ್ ಪವನ್,  ರಾಜಹುಲಿ ಗಿರಿ ಮುಂತಾದವರಿದ್ದಾರೆ.

ಇನ್ನಷ್ಟು ಓದಿರಿ

Scroll to Top