ಶೀಘ್ರದಲ್ಲೇ ಮೈ ನೇಮ್ ಈಸ್ ರಾಜ ತೆರೆಗೆ!

Picture of Cinibuzz

Cinibuzz

Bureau Report

ಅಮೋಘ್  ಎಂಟರ್ ಪ್ರೈಸಸ್ ಲಾಂಛನದ ಅಡಿಯಲ್ಲಿ, ರಾಜ್ ಸೂರಿಯನ್, ಪ್ರಭಾಕರ್ ರೆಡ್ಡಿ, ಕಿರಣ್ ರೆಡ್ಡಿ ನಿರ್ಮಾಣದ ಚಿತ್ರ `ಮೈ ನೇಮ್ ಈಸ್ ರಾಜ.’ ಸಂಚಾರಿ, ಜಟಾಯು ಖ್ಯಾತಿಯ ರಾಜ್ ಸೂರ್ಯನ್ ನಾಯಕನಾಗಿ ಮೂರು ವಿಭಿನ್ನ  ಲುಕ್‍ನಲ್ಲಿ ಕಾಣಿಸಿಕೊಳ್ಳಲಿದ್ದು, ಆಕರ್ಷಿಕ ಮತ್ತು ನಸ್ರೀನ್ ನಾಯಕಿಯರಾಗಿ  ನಟಿಸುತಿದ್ದಾರೆ. ಸಂಯುಕ್ತ 2 ಖ್ಯಾತಿಯ ಪ್ರಭು ಸೂರ್ಯ,  ನೇಪಾಳದ ಸುಂದರಿ ಆಯುಶ್ರೀ,  ಇರಾನ್  ದೇಶದ  ಮಾಡೆಲ್  ಏವಾ ಸಫಾಯಿ ನಟಿಸಿರುವ  ತೆಲುಗು ಮತ್ತು ಕನ್ನಡ ಭಾಷೆಯಲ್ಲಿ ಏಕ ಕಾಲದಲ್ಲಿ ತಯಾರಾಗುತ್ತಿರುವ  ಸಿನಿಮಾ ಇದಾಗಿದೆ. ಈ ಚಿತ್ರ ತೆಲುಗಿನಲ್ಲಿ ನಾ ಪೇರು ರಾಜ ಎಂಬ ಹೆಸರಿನಲ್ಲಿ ತಯಾರಾಗುತ್ತಿದೆ.

ಕರ್ನಾಟಕ, ಕೇರಳ, ಮತ್ತು  ಆಂಧ್ರ-ತೆಲಂಗಾಣ ರಾಜ್ಯಗಳ ಬಹಳಷ್ಟು ಅದ್ಬುತ ಸ್ಥಳಗಳಲ್ಲಿ 65 ದಿನಗಳ ಶೂಟಿಂಗನ್ನು ಸಂಪೂರ್ಣವಾಗಿ ಮುಗಿಸಿ ಚಿತ್ರ ತಂಡ ಬೆಂಗಳೂರಿಗೆ ವಾಪಸ್ ಆಗಿದೆ. ಮಲೆಯಾಳಂ ಮೆಗಾ ಸ್ಟಾರ್ ಮಮ್ಮೂಟಿ ಚಿತ್ರಕ್ಕೆ ಸಂಗೀತ ಸಂಯೊಜಿಸಿರುವ  ಎಲ್ವಿನ್ ಜೋಶ್ವಾ ಮೈ ನೇಮ್ ಇಸ್ ರಾಜ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಈ ಚಿತ್ರದ ಎಲ್ಲಾ ಹಾಡುಗಳು ಒಂದಕ್ಕಿಂತ ವಿಭಿನ್ನವಾಗಿದ್ದು ಎಲ್ಲ ಹಾಡುಗಳನ್ನು ಡಾ. ವಿ. ನಾಗೇಂದ್ರ ಪ್ರಸಾದ್, ಕವಿರಾಜ್ ಮತ್ತು  ಅನಿಲ್ (ದಿಲ್ವಾಲ) ಬರೆದಿರುವುದು ವಿಶೇಷ.

ಇನ್ನು ಮೈ ನೇಮ್ ಈಸ್ ರಾಜ ಈ ಚಿತ್ರದ ಹಾಡುಗಳನ್ನು ಕನ್ನಡ ಮತ್ತು ತೆಲುಗು  ಎರಡೂ ಭಾಷೆಗಳಲ್ಲಿಯೂ ಸಂಚಿತ್ ಹೆಗ್ಡೆ ಚಮಕ್ ಖ್ಯಾತಿಯ ಅಭಿಜಿತ್ ಹಾಗು ಚೇತನ್ ನಾಯಕ್ ಹಾಡಿದ್ದಾರೆ ಇನ್ನು ಈ ಚಿತ್ರವನ್ನು ಅಶ್ವಿನ್ ಕೃಷ್ಣ ನಿರ್ದೇಶನ ಮಾಡಿದ್ದಾರೆ. ಉಳಿದಂತೆ ವೆಂಕಟ್ ಛಾಯಾಗ್ರಹಣ, ಮಾಸ್ ಮಾದ ಮತ್ತು ಥ್ರಿಲ್ಲರ್ ಮಂಜು ಸಾಹಸ ಸಂಯೋಜನೆ, ನಾಗೇಶ್ ಮಾಸ್ಟರ್ ನೃತ್ಯ ಸಂಯೋಜನೆ ಈ ಚಿತ್ರಕ್ಕಿದೆ. ಎಲ್ಲ ಅಂದುಕೊಂಡಂತಾದರೆ ಶೀಘ್ರದಲ್ಲೇ “ಮೈ ನೇಮ್ ಈಸ್ ರಾಜ ”  ಕನ್ನಡ ದಲ್ಲಿ  “ ನಾ ಪೇರು ರಾಜ “ ತೆಲುಗಿನಲ್ಲಿ   ರಿಲೀಸ್ ಆಗಲಿದೆ.

ಇನ್ನಷ್ಟು ಓದಿರಿ

Scroll to Top