ಜುಲೈ 7ಕ್ಕೆ ಕುರುಕ್ಷೇತ್ರ ಆಡಿಯೋ ರಿಲೀಸ್!

Picture of Cinibuzz

Cinibuzz

Bureau Report

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಮೋಸ್ಟ್ ಎಕ್ಸ್ ಪೆಕ್ಟೆಡ್ ಸಿನಿಮಾ ಕುರುಕ್ಷೇತ್ರ. ಚಿತ್ರವನ್ನು ನೋಡಲು ಈಗಾಗಲೇ ಅಭಿಮಾನಿಗಳು ಬಹಳ ದಿನಗಳಿಂದಲೂ ವೇಯ್ಟ್ ಮಾಡುತ್ತಲೇ ಇದ್ದಾರೆ. ಲೇಟ್ ಆದರೂ ಲೇಟೆಸ್ಟ್ ಆಗಿ ರಿಲೀಸ್ ಡೇಟ್ ಅನೌನ್ಸ್ ಮಾಡಿರುವ ಕುರುಕ್ಷೇತ್ರದ ಆಡಿಯೋ ಬಿಡುಗಡೆಗೂ ಕಾಲ ಕೂಡಿ ಬಂದಿದೆ. ಹೌದು ಇದೇ ಜುಲೈ 7ರಂದು ಕುರುಕ್ಷೇತ್ರ ಚಿತ್ರದ ಆಡಿಯೋ ರಿಲೀಸ್ ಕಾರ್ಯಕ್ರಮ ನಡೆಯಲಿದೆ.

ಮುನಿರತ್ನ ಅವರು ಕುರುಕ್ಷೇತ್ರ ಸಿನಿಮಾವನ್ನು ನಿರ್ಮಾಣ ಮಾಡಿದ್ದು, ನಾಗಣ್ಣ ಸೇರಿದಂತೆ ಅನೇಕ ಕೈಗಳು ಸೇರಿ ಕುರುಕ್ಷೇತ್ರದ ನಿರ್ದೇಶನದ ಜವಾಬ್ದಾರಿಯನ್ನು ವಹಿಸಿದೆ. ಈ ಚಿತ್ರವು ನಾಲ್ಕು ಭಾಷೆಗಳಲ್ಲಿ ಬಿಡುಗಡೆಯಾಗಲಿದ್ದು, ಚಿತ್ರಕ್ಕೆ ವಿ ಹರಿಕೃಷ್ಣ ಸಂಗೀತ ಸಂಯೋಜನೆ ಮಾಡಿದ್ಧಾರೆ. ಕನ್ನಡ, ತಮಿಳು, ತೆಲುಗು, ಮಲಯಾಳಂ ಭಾಷೆಗಳಲ್ಲಿ ಕುರುಕ್ಷೇತ್ರದ ಪೋಸ್ಟರ್ ಸಹ ರಿಲೀಸ್ ಆಗಿದ್ದು, ವರಮಹಾಲಕ್ಷ್ಮಿ ಹಬ್ಬಕ್ಕೆ ಕುರುಕ್ಷೇತ್ರ ರಿಲೀಸ್ ಆಗುವ ಸಾಧ್ಯತೆ ಇದೆ.

ಇನ್ನಷ್ಟು ಓದಿರಿ

Scroll to Top