ರಿಲೀಸ್ ಆಯ್ತು ದೇವಕಿ ಟ್ರೇಲರ್!

Picture of Cinibuzz

Cinibuzz

Bureau Report

ಬ್ಲ್ಯಾಕ್ ಮೇಲೆ ಮಾಡ್ಕೊಂಡು ಹೊಲಸು ತಿನ್ನೋ ಬೋಳಿ ಮಕ್ಳ ನಿಮಗೆ ಅಪ್ಪ ಅಮ್ಮನ ನೋವು ಗೊತ್ತೆನ್ರೋ’ ಎಂಬ ಡೈಲಾಗ್ ಮೂಲಕ ಪೊಲೀಸ್ ಆಫೀಸರ್ ಆಗಿ ವಿಜೃಂಭಿಸುವ ಕಿಶೋರ್ ದೇವಕಿಯ ಟ್ರೇಲರ್ ನಲ್ಲಿ ಹೆಚ್ಚು ಗಮನಸೆಳೆದ ಪಾತ್ರ. ಮಗಳನ್ನು ಕಳೆದುಕೊಂಡ ಪರಡಾಡುವ ತಾಯಿಯಾಗಿ ಪ್ರಿಯಾಂಕ ಹೆಚ್ಚು ಹತ್ತಿರವಾದರೆ, ಕಳೆದುಹೋದ ಮಗಳಾಗಿ ಐಶ್ವರ್ಯಾ ಉಪೇಂದ್ರ ದನಿ ಮಾತ್ರ ಟ್ರೇಲರ್ ನಲ್ಲಿ ಕೇಳಿಸಿ ಮರೆಯಾಗುತ್ತದೆ‌.

ಮಕ್ಕಳನ್ನು ಕದ್ದು ಮಾರಾಟ ಮಾಡುವ ದಂದೆಯ ಕುರಿತಾಗಿ ದೇವಕಿಯಲ್ಲಿ ಪ್ರಮುಖ ವಿಚಾರಗಳಿದ್ದು, ಅಂತಹ ಎಕ್ಸ್ ಕ್ಯೂಸಿವ್ ಸಂಗತಿಗಳ ಮುಖಾಂತರವೇ ಕಥೆ ಸಾಗಲಿದೆ. ಸದ್ಯ ಚಿತ್ರದ ಟ್ರೇಲರ್ ಹೊರಬಿದ್ದಿದ್ದು ಮಮ್ಮಿ ಡೈರೆಕ್ಟರ್ ಮತ್ತಿನ್ನೇನಲ್ಲೋ ಹೇಳ ಹೊರಟಿರೋದು… ಅದರಲ್ಲೂ ಜನರಿಗೆ ಹತ್ತಿರವಾಗುವ ವಿಚಾರಗಳನ್ನು ತನ್ನದೇ ಶೈಲಿಯಲ್ಲಿ ಲೋಹಿತ್ ತೋರಿಸುವ ಪ್ರಯತ್ನ ಮಾಡಿರೋದು ಈ ಮೂಲಕ ಸ್ಪಷ್ಟವಾಗಿದೆ. ಮುಂದಿನ ತಿಂಗಳು ದೇವಕಿ ರಿಲೀಸ್ ಆಗಲಿದೆ.

ಇನ್ನಷ್ಟು ಓದಿರಿ

Scroll to Top